ADVERTISEMENT

ಭತ್ತ ರೋಗ ನಿರ್ವಹಣೆ ಬಗ್ಗೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 1:05 IST
Last Updated 21 ಅಕ್ಟೋಬರ್ 2020, 1:05 IST
ಭತ್ತದಲ್ಲಿ ಬರುವ ಕಾಡಿಗೆ ರೋಗ ಕುರಿತು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೈತರಿಗೆ ಸೂಚನೆ ನೀಡುತ್ತಿರುವುದು
ಭತ್ತದಲ್ಲಿ ಬರುವ ಕಾಡಿಗೆ ರೋಗ ಕುರಿತು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೈತರಿಗೆ ಸೂಚನೆ ನೀಡುತ್ತಿರುವುದು   

ರಾಯಚೂರು: ಭತ್ತದಲ್ಲಿ ಬರುವ ಕಾಡಿಗೆ ರೋಗವು ಧಾನ್ಯಗಳ ಪಕ್ವತೆಯ ಸಮಯದಲ್ಲಿ ನೇರವಾಗಿ ಪರಿಣಾಮ ಬೀರುತ್ತದೆ. ಅಲ್ಲದೇ, ಇದು ಗುಣಮಟ್ಟದ ಕ್ಷೀಣತೆಗೆ ಕಾರಣವಾಗುತ್ತದೆ. ಇದನ್ನು ನಿರ್ವಹಣೆ ಮಾಡುವ ವಿಧಾನಗಳ ಬಗ್ಗೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಅಗತ್ಯ ಸೂಚನೆ ನೀಡಿದ್ದಾರೆ.

ಈ ರೋಗವು ಭತ್ತದಲ್ಲಿ ಹೂ ಬಿಟ್ಟನಂತರ ಕಾಳು ಕಟ್ಟುವ ಸಮಯದಲ್ಲಿ ಅಥವಾ ಕಾಳುಗಳು ಮಾಗುವ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಬಿಳಿ ಅಥವಾ ಹಸಿರು ಬಣ್ಣದ ಕಾಡಿಗೆ ಕಾಯಿಗಳಾಗಿ ಕಂಡುಬರುತ್ತದೆ. ಆನಂತರ ಆ ಕಾಯಿಗಳು ಕಂದು ಬಣ್ಣದಿಂದ ಕಪ್ಪು ಬಣ್ಣದ ಕಾಯಿಗಳಾಗಿ ಮಾರ್ಪಡುತ್ತವೆ.

ಈ ರೋಗದ ನಿರ್ವಹಣೆಗಾಗಿ ಟ್ರಿಫ್ಲಾಕ್ಸಿಸ್ಟ್ರೋಬಿನ್ ಶೇ 25 ಹಾಗೂ ಟೆಬುಕೊನೊಜೋಲ್ ಶೇ 50, ಶಿಲಿಂಧ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ 0.4 ಗ್ರಾಂ. ಸೇರಿಸಿ ಭತ್ತವು ಹೂ ಬಿಡುವ ಹಂತದಲ್ಲಿ ಸಿಂಪರಣೆ ಮಾಡಬೇಕು. ರೋಗದ ಲಕ್ಷಣಗಳು ಕಂಡುಬಂದ ನಂತರ ಅಥವಾ ಭತ್ತವು ಕಾಳು ಕಟ್ಟಿದ ನಂತರ ಈ ಶಿಲೀಂಧ್ರನಾಶಕದ ಸಿಂಪಡಣೆಯು ಪ್ರಯೋಜನಕಾರಿ ಆಗುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಹೂ ಬಿಡುವ ಹಂತದಲ್ಲಿ ಸಿಂಪಡಣೆ ಮಾಡಿದರೆ ಹತೋಟಿ ತರಬಹುದು ಎಂದು ತಿಳಿಸಿದ್ದಾರೆ.

ADVERTISEMENT

ರೋಗದ ಕುರಿತು ಹೆಚ್ಚಿನ ಮಾಹಿತಿಗಾಗಿ ಕೀಟಶಾಸ್ತ್ರ ವಿಜ್ಞಾನಿ ಡಾ. ಶ್ರೀವಾಣಿ ಜಿ.ಎನ್ ಅವರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08532-220196. ಉಚಿತ ಸಹಾಯವಾಣಿ ಸಂಖ್ಯೆ 1800 425 0470ಗೆ ಕರೆ ಮಾಡಬಹುದು ಎಂದು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.