ADVERTISEMENT

ಎನ್ಎಸ್ಎಸ್‌ನಿಂದ ವ್ಯಕ್ತಿತ್ವ ವಿಕಸನ: ಮಹೇಶಕುಮಾರ ತುಪ್ಪದ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 15:43 IST
Last Updated 7 ಜನವರಿ 2024, 15:43 IST
<div class="paragraphs"><p>ಎನ್ಎಸ್ಎಸ್‌</p></div>

ಎನ್ಎಸ್ಎಸ್‌

   

ಚಿತ್ರಕೃಪೆ: Wikipedia

ರಾಯಚೂರು: ‘ರಾಷ್ಟ್ರದ ಬೆಳವಣಿಗೆಯಲ್ಲಿ ಎನ್‌ಎಸ್‌ಎಸ್‌ ಪಾತ್ರ ದೊಡ್ಡದಿದೆ. ವಿದ್ಯಾರ್ಥಿಗಳು ಎನ್‌.ಎಸ್.ಎಸ್ ಸೇರುವ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು’ ಎಂದು ಸಂಪನ್ಮೂಲ ವ್ಯಕ್ತಿ ಮಹೇಶಕುಮಾರ ತುಪ್ಪದ  ಹೇಳಿದರು.

ADVERTISEMENT

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ರಾಯಚೂರು ತಾಲ್ಲೂಕಿನ ಮನ್ಸಲಾಪೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಎನ್.ಎಸ್.ಎಸ್ ವಾರ್ಷಿಕ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಗುರುಸ್ವಾಮಿ ಹಿರೇಮಠ ಮಾತನಾಡಿ, ‘ಉದ್ಯೋಗ ಪಡೆಯುವುದಕ್ಕೆ ಪಠ್ಯ ನೆರವಿಗೆ ಬಂದರೆ, ಜೀವನ ನಡೆಸುವುದಕ್ಕೆ ಪಠ್ಯೇತರ ಚಟುವಟಿಕೆ ಸಹಕಾರಿ ಆಗುತ್ತದೆ’ ಎಂದರು.

ಪ್ರಾಚಾರ್ಯ ಗೋಪಾಲ ನಾಯಕ ಮಾತನಾಡಿದರು. ಉಪನ್ಯಾಸಕ ರವಿಕುಮಾರ, ಜ್ಯೋತಿ, ಶಿಬಿರದ ಅಧಿಕಾರಿ ಗೂಡುಲಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.