ADVERTISEMENT

ಪಿಕಾರ್ಡ್ ಬ್ಯಾಂಕ್ | ಸಾಲ ವಸೂಲಾತಿಯಲ್ಲಿ ಶೇ.75 ರಷ್ಟು ಸಾಧನೆ: ಸಲೀಮ್ ಪಾಷಾ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 13:59 IST
Last Updated 19 ಜುಲೈ 2024, 13:59 IST
ಸಲೀಮ್ ಪಾಷಾ
ಸಲೀಮ್ ಪಾಷಾ   

ಮಾನ್ವಿ: ಪಟ್ಟಣದ ಪಿಕಾರ್ಡ್ ಬ್ಯಾಂಕ್ 2023-24ನೇ ಸಾಲಿನ ಸಾಲ ವಸೂಲಾತಿಯಲ್ಲಿ ಶೇ 75 ರಷ್ಟು ಪ್ರಗತಿ ಸಾಧಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಲೀಮ್ ಪಾಷಾ ಹೇಳಿದರು.


ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಪಿಕಾರ್ಡ್ ಬ್ಯಾಂಕ್ ಕಳೆದ 63 ವರ್ಷಗಳಿಂದ ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ನಾನು ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡ ನಂತರ ಐದು ವರ್ಷಗಳಲ್ಲಿ ಬ್ಯಾಂಕಿನ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕ ಜಿ.ಹಂಪಯ್ಯ ನಾಯಕ ಅವರ ಮಾರ್ಗದರ್ಶನ, ಬ್ಯಾಂಕಿನ ‌ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರದಿಂದ ಬ್ಯಾಂಕಿನ ಸಾಲ ವಸೂಲಾತಿಯಲ್ಲಿ 2021-22 ರಲ್ಲಿ ಶೇ 28.07, 2022-23ರಲ್ಲಿ ಶೇ 32.26 ಹಾಗೂ 2023-24ನೇ ಸಾಲಿನಲ್ಲಿ ಶೇ 75.82ರಷ್ಟು ಪ್ರಗತಿ ಸಾಧಿಸಿದ್ದು, ಬ್ಯಾಂಕಿನ ಸದಸ್ಯರಿಗೆ ₹90 ಲಕ್ಷ ಸಾಲಹಂಚಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

’ಪ್ರಸಕ್ತ 2024-25ನೇ ಸಾಲಿಗೆ ₹26 ಲಕ್ಷ ಸಾಲ ನೀಡಿದ್ದು ಹಾಗೂ ₹50 ಲಕ್ಷ ಹೊಸ ಸಾಲ ಹಂಚಿಕೆ ನೀಡುವುದು ಪ್ರಗತಿಯಲ್ಲಿದೆ' ಎಂದರು. ಮುಖಂಡ ಸುಂದರ್ ಕಪಗಲ್ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.