ADVERTISEMENT

ಮಸ್ಕಿ: ಪೈಪ್‌ಲೈನ್ ಗುಂಡಿ ಮುಚ್ಚಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 6:07 IST
Last Updated 7 ಜುಲೈ 2025, 6:07 IST
ಮಸ್ಕಿಯ ಬಸವೇಶ್ವರ ನಗರದಲ್ಲಿ ಪೈಪ್‌ಲೈನ್‌ಗಾಗಿ ಅಗೆದ ರಸ್ತೆಯ ಗುಂಡಿಗಳನ್ನು ಭಾನುವಾರ ಗುತ್ತಿಗೆದಾರರು ಮುಚ್ಚಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು
ಮಸ್ಕಿಯ ಬಸವೇಶ್ವರ ನಗರದಲ್ಲಿ ಪೈಪ್‌ಲೈನ್‌ಗಾಗಿ ಅಗೆದ ರಸ್ತೆಯ ಗುಂಡಿಗಳನ್ನು ಭಾನುವಾರ ಗುತ್ತಿಗೆದಾರರು ಮುಚ್ಚಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು   

ಮಸ್ಕಿ: ಅಮೃತ 2.0 ಯೋಜನೆ ಅಡಿಯಲ್ಲಿ ಪಟ್ಟಣದ ಬಸವೇಶ್ವರ ನಗರದಲ್ಲಿ ಪೈಪ್‌ಲೈನ್‌ ಅಳವಡಿಕೆಗಾಗಿ ರಸ್ತೆಯಲ್ಲಿ ಅಗೆದ ಗುಂಡಿಗಳನ್ನು ಭಾನುವಾರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮುಚ್ಚಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

‘ಅಮೃತ ಯೋಜನೆ ಕಾಮಗಾರಿ ಸ್ಥಗಿತ-ಜನರ ಪರದಾಟ’ ಶೀರ್ಷಿಕೆ ಅಡಿಯಲ್ಲಿ ‘ಪ್ರಜಾವಾಣಿ’ಯ ಜು.5ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ₹42 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಅಮೃತ 2.0 ಕುಡಿಯುವ ನೀರಿನ ಯೋಜನೆ ಕಾಮಗಾರಿ ಹಲವು ದಿನಗಳಿಂದ ಸ್ಥಗಿತಗೊಂಡಿದೆ.

ADVERTISEMENT

ಬಸವೇಶ್ವರ ನಗರದಿಂದ ಕಾಮಗಾರಿ ಚಾಲನೆ ಮಾಡಿದ್ದ ಯೋಜನೆಯ ಗುತ್ತಿಗೆದಾರರು ರಸ್ತೆಯ ನಡುವೆ ಅವೈಜ್ಞಾನಿಕವಾಗಿ ಪೈಪ್‌ಲೈನ್ ಹಾಕಿದ್ದರು. ಸ್ಥಳಕ್ಕೆ ಆಗಮಿಸಿದ ನೀರು ಸರಬರಾಜು ಮಂಡಳಿ ಅಧಿಕಾರಿಗಳು ರಸ್ತೆಯ ನಡುವೆ ಹಾಕಿದ್ದ ಪೈಪ್ ತೆಗೆದು ರಸ್ತೆಯ ದಂಡೆಯಲ್ಲಿ ಹಾಕುವಂತೆ ಸೂಚಿಸಿದ್ದರು. ಅದರಂತೆ ಪೈಪ್‌ ತೆಗೆದ ಗುತ್ತಿಗೆದಾರರು ಸರಿಯಾಗಿ ರಸ್ತೆಗುಂಡಿ ಮುಚ್ಚದ ಕಾರಣ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತು. ಈ ಗುಂಡಿಯಲ್ಲಿ ವಾಹನಗಳು ಸಿಕ್ಕಿಕೊಂಡು ತೊಂದರೆ ಅನುಭವಿಸುವಂತಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.