
ರಾಯಚೂರು: ತರಕಾರಿ ಸಗಟು ಮಾರುಕಟ್ಟೆಯಲ್ಲಿ ಗ್ರಾಹಕರು ಹೆಚ್ಚು ಇಷ್ಟಪಡುವ ನಾಲ್ಕು ತರಕಾರಿಗಳನ್ನು ಬಿಟ್ಟರೆ ಉಳಿದೆಲ್ಲ ತರಕಾರಿಗಳ ಬೆಲೆ ಸ್ಥಿರವಾಗಿದೆ.
ಪ್ರತಿ ಕ್ವಿಂಟಲ್‌ಗೆ ಬೆಳ್ಳುಳ್ಳಿ ₹ 3 ಸಾವಿರ, ಬೆಂಡೆಕಾಯಿ, ನುಗ್ಗೆಕಾಯಿ ₹ 2 ಸಾವಿರ, ಬದನೆಕಾಯಿ, ಸೌತೆಕಾಯಿ ₹ 1 ಸಾವಿರ ಹಾಗೂ ಈರುಳ್ಳಿ ಬೆಲೆ ₹ 500 ಹೆಚ್ಚಾಗಿದೆ. ಆಲೂಗಡ್ಡೆ, ಮೆಣಸಿನಕಾಯಿ, ಹಿರೇಕಾಯಿ, ತೊಂಡೆಕಾಯಿ, ಡೊಣಮೆಣಸಿನಕಾಯಿ, ತುಪ್ಪದ ಹಿರೇಕಾಯಿ, ಎಲೆಕೋಸು, ಗಜ್ಜರಿ ಹಾಗೂ ಬೀನ್ಸ್ ಬೆಲೆ ಸ್ಥಿರವಾಗಿದೆ.
ಪ್ರತಿ ಕ್ವಿಂಟಲ್‌ಗೆ ಹೂಕೋಸು ₹ 2,500, ಚವಳೆಕಾಯಿ ₹ 2 ಸಾವಿರ, ಬೀಟ್‌ರೂಟ್ ₹ 1,500, ಟೊಮೆಟೊ ₹ 1 ಸಾವಿರ ಕಡಿಮೆಯಾಗಿದೆ.
ವಿಪರೀತ ಚಳಿ ಇರುವ ಕಾರಣ ಬೆಳಿಗ್ಗೆ ಹಾಗೂ ಸಂಜೆ ವೇಳೆ ಜನ ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ಬೆಲೆ ಏರಿದರೂ ನುಗ್ಗೆಕಾಯಿ ಬೇಡಿಕೆ ಕಡಿಮೆಯಾಗಿಲ್ಲ. ಹಿರೇಕಾಯಿ, ತೊಂಡೆಕಾಯಿ ಮಾರುಕಟ್ಟೆಯಲ್ಲಿ ಗತ್ತು ಉಳಿಸಿಕೊಂಡಿವೆ.
ಎಲೆಕೋಸು ಹಾಗೂ ಹೂಕೋಸು ಬೆಲೆ ಇಳಿದಿರುವ ಕಾರಣ ಗ್ರಾಹಕರು ಸಂಜೆ ವೇಳೆಯಲ್ಲಿ ಮಂಚೂರಿ ಮಾಡಿ ಉಪಾಹಾರವಾಗಿ ಸೇವಿಸಲು ಒಯ್ಯುತ್ತಿದ್ದಾರೆ. ಈ ವಾರ ಬೀನ್ಸ್ ಗ್ರಾಹಕರ ಕಾಯ್ದಿದೆ.
ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ , ಬೆಳಗಾವಿ ಹಾಗೂ ಬೈಲಹೊಂಗಲ ತಾಲ್ಲೂಕಿನಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ, ಸಬ್ಬಸಗಿ ಸೊಪ್ಪು ಬಂದಿದೆ. ಆಂಧ್ರಪ್ರದೇಶದ ಗಡಿ ಗ್ರಾಮ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ಸ್ವಲ್ಪ ಎಲೆಕೋಸು, ಹೂಕೋಸು, ಬದನೆಕಾಯಿ, ಅವರೆಕಾಯಿ ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.
‘ತರಕಾರಿ ಮಾರುಕಟ್ಟೆಯಲ್ಲಿ ಕೆಲ ತರಕಾರಿ ಬೆಲೆಗಳಲ್ಲಿ ಏರಿಳಿತವಾಗಿದೆ. ಕಡಿಮೆಯಾಗಿವೆ. ನುಗ್ಗೆಕಾಯಿ ಬೆಲೆ ಕಡಿಮೆಯಾಗಿಲ್ಲ’ ಎಂದು ತರಕಾರಿ ವ್ಯಾಪಾರಿ ಸುನೀಲಕುಮಾರ ಹೇಳುತ್ತಾರೆ.
ತರಕಾರಿ (ಪ್ರತಿ ಕೆ.ಜಿ) ಕಳೆದ ವಾರ– ಈ ವಾರ (₹ ಗಳಲ್ಲಿ)
ಈರುಳ್ಳಿ;30;35
ಬೆಳ್ಳುಳ್ಳಿ;120;150
ಆಲೂಗಡ್ಡೆ;30;30
ಮೆಣಸಿನಕಾಯಿ;40;40
ಎಲೆಕೋಸು;30;30
ಹೂಕೋಸು;45;20
ಗಜ್ಜರಿ;60;60
ಬೀಟ್‌ರೂಟ್;45;30
ಬೀನ್ಸ್;40;40
ಟೊಮೆಟೊ;40;30
ಬದನೆಕಾಯಿ;30;40
ಹಿರೇಕಾಯಿ;60;60
ಬೆಂಡೆಕಾಯಿ;40;60
ತೊಂಡೆಕಾಯಿ;60;60
ಡೊಣಮೆಣಸಿನಕಾಯಿ;40;40
ತುಪ್ಪದ ಹಿರೇಕಾಯಿ;40;40
ಚವಳೆಕಾಯಿ;60;40
ಸೌತೆಕಾಯಿ;40;50
ನುಗ್ಗೆಕಾಯಿ;120;320
...................................
ಸೊಪ್ಪಿನ ಬೆಲೆ
ಸಬ್ಬಸಗಿ;₹10ಕ್ಕೆ 4ಸಿವುಡು
ಮೆಂತೆ;₹10ಕ್ಕೆ 4ಸಿವುಡು
ಕೊತಂಬರಿ;₹10ಕ್ಕೆ4 ಸಿವುಡು
ಪಾಲಕ್;₹10ಕ್ಕೆ 4 ಸಿವುಡು
ಪುಂಡಿಪಲ್ಯ;₹10ಕ್ಕೆ 5 ಸಿವುಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.