ADVERTISEMENT

ಸಿಡಿಪಿಒ ಮೇಲೆ ಹಲ್ಲೆ: ಬಂಧನಕ್ಕೆ ಆಗ್ರಹ

ಅಂಗನವಾಡಿ ಫೆಡರೇಶನ್‍ನಿಂದ ಪ್ರತಿಭಟನಾ ಧರಣಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 4:52 IST
Last Updated 8 ನವೆಂಬರ್ 2020, 4:52 IST
ಸಿಂಧನೂರಿನ ಮಿನಿವಿಧಾನಸೌಧದ ಎದುರು ಅಂಗನವಾಡಿ ಫೆಡರೇಶನ್‍ನಿಂದ ಶನಿವಾರ ಪ್ರತಿಭಟನಾ ಧರಣಿ ನಡೆಸಲಾಯಿತು
ಸಿಂಧನೂರಿನ ಮಿನಿವಿಧಾನಸೌಧದ ಎದುರು ಅಂಗನವಾಡಿ ಫೆಡರೇಶನ್‍ನಿಂದ ಶನಿವಾರ ಪ್ರತಿಭಟನಾ ಧರಣಿ ನಡೆಸಲಾಯಿತು   

ಸಿಂಧನೂರು: ಸಿಂಧನೂರಿನ ಸಿಡಿಪಿಒ ಟಿ.ಯೋಗಿತಾಬಾಯಿ ಅವರ ಮೇಲೆ ಮಾಡಿದ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ತಾಲ್ಲೂಕು ಘಟಕದಿಂದ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.

ಎಐಟಿಯುಸಿ ಅಧ್ಯಕ್ಷ ಬಾಷುಮಿಯಾ ಮಾತನಾಡಿ, ಶ್ರೀದೇವಿ ಶ್ರೀನಿವಾಸ ಅವರ ವರ್ತನೆ ಕುರಿತು ಈಗಾಗಲೇ ತಹಶೀಲ್ದಾರ್‌ ಅವರು, ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಕೂಡಲೇ ಶ್ರೀದೇವಿ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ, ಬಂಧಿಸಬೇಕು. ಜೊತೆಗೆ ಸಿಡಿಪಿಒ ಯೋಗಿತಾಬಾಯಿ ಅವರಿಗೆ ರಕ್ಷಣೆ ನೀಡಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಹಂತ ಹಂತವಾಗಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಿರಸ್ತೇದಾರ್ ಅಂಬಾದಾಸ್ ಮನವಿ ಪತ್ರ ಸ್ವೀಕರಿಸಿದರು.

ADVERTISEMENT

ಉಪನ್ಯಾಸಕ ಚಂದ್ರಶೇಖರ ಗೊರಬಾಳ, ಸಮುದಾಯ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ದಲಿತ ಸಂಘಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ನಂಜಲದಿನ್ನಿ ಮಾತನಾಡಿದರು.

ಫೆಡರೇಶನ್ ರಾಜ್ಯ ಸಮಿತಿ ಸದಸ್ಯರಾದ ತಿಪ್ಪಯ್ಯಶೆಟ್ಟಿ, ಸಿದ್ರಾಮೇಶಸ್ವಾಮಿ ಮಾನ್ವಿ, ಅಧ್ಯಕ್ಷೆ ಗಿರಿಜಮ್ಮ, ಕಾರ್ಯದರ್ಶಿ ಆದಿಲಕ್ಷ್ಮಿ, ಖಜಾಂಚಿ ಲಕ್ಷ್ಮಿ, ಸದಸ್ಯರಾದ ಪ್ರಭಾವತಿ, ಶಾಂತಮ್ಮ, ತ್ರಿವೇಣಿ, ಸುರೇಖಾ, ಪಾರ್ವತಿ, ಸುಭದ್ರಾ, ಯಮನಮ್ಮ, ಸರಸ್ವತಿ, ಸುಧಾ, ಸುಲೋಚನಾ, ಸಾವತ್ರಿ, ರತ್ನಮ್ಮ, ನಾಗವೇಣಿ, ನಾಗರತ್ನ, ಗೌರಮ್ಮ, ಲಕ್ಷ್ಮಿದೇವಿ, ಅರಳಮ್ಮ, ಆರೋಗ್ಯಮ್ಮ, ಸಹಾಯ ಮೇರಿ, ಸುಧಾ, ಮೌಲಾಬಿ, ಮಲ್ಲಮ್ಮ, ಕಾಂತಾಯಮ್ಮ, ಹುಲಿಗೆಮ್ಮ, ಇಂದ್ರಮ್ಮ, ಈರಮ್ಮ ಹಾಗೂ ಅಂಗನ ವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ತಾಲ್ಲೂಕು ಘಟಕದ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.