ADVERTISEMENT

ಸಿಂಧನೂರು: ಕಾಂಗ್ರೆಸ್‌ನಿಂದ ಪೊಲೀಸ್‌ ಇಲಾಖೆ ದುರ್ಬಖಕೆ ಆರೋಪ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 15:46 IST
Last Updated 4 ಜನವರಿ 2024, 15:46 IST
ಸಿಂಧನೂರು ತಾಲ್ಲೂಕು ಹಿಂದೂ ಜಾಗರಣ ವೇದಿಕೆ ಘಟಕದ ಮುಖಂಡರು ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಿದರು
ಸಿಂಧನೂರು ತಾಲ್ಲೂಕು ಹಿಂದೂ ಜಾಗರಣ ವೇದಿಕೆ ಘಟಕದ ಮುಖಂಡರು ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಿದರು   

ಸಿಂಧನೂರು: ‘ರಾಮಭಕ್ತರನ್ನು ಬಿಡುಗಡೆಗೊಳಿಸಿ, ಇಲ್ಲವೇ ನಾನು ರಾಮಭಕ್ತ ನನ್ನನ್ನು ಬಂಧಿಸಿ ಚಳವಳಿ’ ಅಂಗವಾಗಿ ಹಿಂದೂ ಜಾಗರಣ ವೇದಿಕೆ ತಾಲ್ಲೂಕು ಘಟಕದ ಮುಖಂಡರು ಗುರುವಾರ ನಗರದ ಸುಕಾಲಪೇಟೆ ರಸ್ತೆಯಲ್ಲಿರುವ ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟಿಸಿದರು.

‘ರಾಮಭಕ್ತರನ್ನು ಹತ್ತಿಕ್ಕುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಯೋಧ್ಯ ರಾಮ ಮಂದಿರದ ಹೋರಾಟದ ಘಟನೆಯನ್ನು ಮುಂದಿಟ್ಟುಕೊಂಡು ಪ್ರಕರಣಗಳನ್ನು ದಾಖಲೆ ಮಾಡುತ್ತಿದೆ. ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಮಭಕ್ತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ಡಿವೈಎಸ್ಪಿ ಬಿ.ಎಸ್.ತಳವಾರ ಮನವಿ ಪತ್ರ ಸ್ವೀಕರಿಸಿದರು.

ADVERTISEMENT

ಹಿಂದೂ ಜಾಗರಣ ವೇದಿಕೆಯ ಸದಸ್ಯರಾದ ಪಂಪಾಪತಿ ನಾಯಕ, ಮಂಜುನಾಥ ಹರಸೂರು, ವಿಜಯ್ ಚೌದರಿ, ಹನುಮಂತ, ಮಲ್ಲಯ್ಯ, ಗಿರೀಶ್ ವಕೀಲ, ಸತೀಶ್ ಮುನ್ಸಿ, ವೀರೇಶ್, ಮಹೇಶ್, ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.