ADVERTISEMENT

ಮುದಗಲ್ | ಅಡ್ಡಾದಿಡ್ಡಿ ವಾಹನ ನಿಲ್ಲಿಸಿದರೆ ದಂಡ: ಪಿಎಸ್ಐ ವೆಂಕಟೇಶ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 14:13 IST
Last Updated 4 ಫೆಬ್ರುವರಿ 2025, 14:13 IST
ಮುದಗಲ್ ಪಟ್ಟಣದ ಪುರಸಭೆ ಮುಂದೆ ಎಲ್ಲೆಂದರಲ್ಲಿ ಬೇಕಾ ಬಿಟ್ಟಿಯಾಗಿ ವಾಹನ ನಿಲ್ಲಿಸಿದ ವಾಹನ ಮಾಲೀಕರಿಗೆ ಪಿಎಸ್ಐ ವೆಂಕಟೇಶ ಅವರು ಪಾರ್ಕಿಂಗ್ ವಾಹನ ನಿಲ್ಲಿಸಲು ಸೂಚಿಸುತ್ತಿರುವುದು
ಮುದಗಲ್ ಪಟ್ಟಣದ ಪುರಸಭೆ ಮುಂದೆ ಎಲ್ಲೆಂದರಲ್ಲಿ ಬೇಕಾ ಬಿಟ್ಟಿಯಾಗಿ ವಾಹನ ನಿಲ್ಲಿಸಿದ ವಾಹನ ಮಾಲೀಕರಿಗೆ ಪಿಎಸ್ಐ ವೆಂಕಟೇಶ ಅವರು ಪಾರ್ಕಿಂಗ್ ವಾಹನ ನಿಲ್ಲಿಸಲು ಸೂಚಿಸುತ್ತಿರುವುದು   

ಮುದಗಲ್: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದರೆ ದಂಡ ವಿಧಿಸುತ್ತೇವೆ ಎಂದು ಪಿಎಸ್ಐ ವೆಂಕಟೇಶ ಎಚ್ಚರಿಸಿದರು.

ಪಟ್ಟಣದ ಲಿಂಗಸುಗೂರು, ಬಾಗಲಕೋಟೆ ಮುಖ್ಯರಸ್ತೆ, ಪುರಸಭೆ ಮುಂಭಾಗ, ವಿವಿಧ ಬ್ಯಾಂಕ್‌ಗಳ ಮುಂಭಾಗ ಹಾಗೂ ಬಸ್‌ನಿಲ್ದಾಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಾಹನ ಸವಾರರು ಎಲ್ಲೆಂದರಲ್ಲಿ ನಿಲ್ಲಿಸಿ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ. ನಿಮ್ಮ ವಾಹನಗಳನ್ನು ನಿಗದಿತ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕೆಂದು ವಾಹನ ಮಾಲೀಕರಿಗೆ ಸೂಚಿಸಿದರು. ತಪ್ಪಿದಲ್ಲಿ ದಂಡ ವಿಧಿಸುತ್ತೇವೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT