ADVERTISEMENT

ಸಿಂಧನೂರು| ಸ್ವಾತಂತ್ರ್ಯ ಚಳುವಳಿ ಎಂದರೆ ಕಾಂಗ್ರೆಸ್ ಅಲ್ಲ: ಆರ್.ಮಾನಸಯ್ಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 5:36 IST
Last Updated 2 ಮಾರ್ಚ್ 2026, 5:36 IST
ಸಿಂಧನೂರಿನ ಶಾದಿಮಹಲ್‍ನಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಶನಿವಾರ ಹಮ್ಮಿಕೊಂಡಿದ್ದ ‘ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಕಮ್ಯೂನಿಷ್ಟರ ಪಾತ್ರ’ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷದ ಮುಖಂಡ ಆರ್.ಮಾನಸಯ್ಯ ಮಾತನಾಡಿದರು 
ಸಿಂಧನೂರಿನ ಶಾದಿಮಹಲ್‍ನಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಶನಿವಾರ ಹಮ್ಮಿಕೊಂಡಿದ್ದ ‘ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಕಮ್ಯೂನಿಷ್ಟರ ಪಾತ್ರ’ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷದ ಮುಖಂಡ ಆರ್.ಮಾನಸಯ್ಯ ಮಾತನಾಡಿದರು    

ಸಿಂಧನೂರು: ‘ಜಾತಿ ನಿರ್ಮೂಲನೆ ಅಂಬೇಡ್ಕರ್ ಹಾಗೂ ಮಾರ್ಕ್ಸ್‌ ವಾದಿಗಳ ಪರಮ ಗುರಿಯಾಗಬೇಕು. ಜಾತಿ ನಿರ್ಮೂಲನೆ ಕಾರ್ಯಕ್ರಮ ಇಲ್ಲದೆ ವರ್ಗ ಹೋರಾಟ ಯಶಸ್ವಿಯಾಗದು’ ಎಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷದ ಮುಖಂಡ ಆರ್.ಮಾನಸಯ್ಯ ಅಭಿಪ್ರಾಯಪಟ್ಟರು.

ನಗರದ ಶಾದಿಮಹಲ್‍ನಲ್ಲಿ ಸಿಪಿಐ(ಎಂಎಲ್) ರೆಡ್‌ಸ್ಟಾರ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ಅವರು ಕಮ್ಯುನಿಸ್ಟ್ ಮುಂದಾಳುಗಳು ತಾಳಿದ ಯಾಂತ್ರಿಕ ಮಾರ್ಕ್ಸ್‌ ವಾದವನ್ನು ವಿರೋಧಿಸಿದ್ದರು. ರಾಜ್ಯಾಧಿಕಾರವನ್ನು ಕೈವಶ ಮಾಡಿಕೊಳ್ಳಬೇಕಾಗಿದೆ. ಸ್ವಾತಂತ್ರ್ಯ ಚಳುವಳಿ ಎಂದರೆ ಕೇವಲ ಕಾಂಗ್ರೆಸ್ ಅಲ್ಲವೇ ಅಲ್ಲ. ಕಮ್ಯುನಿಸ್ಟರ ವಿರೋಚಿತ ಹೋರಾಟದ ತ್ಯಾಗ ಬಲಿದಾನ ಇದರ ಹಿಂದಿದೆ ಎಂದು ಆರ್.ಮಾನಸಯ್ಯ ಹೇಳಿದರು.

ADVERTISEMENT

ಉಪನ್ಯಾಸಕ ನಾರಾಯಣ ಬೆಳಗುರ್ಕಿ ಮಾತನಾಡಿ, ‘ಈ ದೇಶದ ರೈತ, ಕಾರ್ಮಿಕ, ಆದಿವಾಸಿ ಹಾಗೂ ದಮನಿತರ ಪ್ರತಿಯೊಂದು ಹೋರಾಟಗಳ ಹಿಂದೆ ಕಮ್ಯೂನಿಷ್ಟರ ಮಹತ್ವದ ಪಾತ್ರ ಇದೆ’ ಎಂದು ವಿವರಿಸಿದರು. 

ಕಂದೇಗಾಲ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಸಿಪಿಐ(ಎಂಎಲ್)ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ಮಾತನಾಡಿದರು, ಆದೇಶ ನಗನೂರು ನಿರೂಪಿಸಿದರು. ಉಪನ್ಯಾಸಕ ಶಂಕರ ವಾಲೇಕರ್, ಸಿಪಿಎಂ ಮುಖಂಡ ಬಸವಂತರಾಯಗೌಡ ಕಲ್ಲೂರು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ್, ಎಚ್.ಇ.ಸಣ್ಣಪ್ಪ, ಜಯಣ್ಣ ಕೊಡಗು, ಸಂದೀಪ್.ಬಿ.ಆರ್, ಸಂತೋಷ ಹಿರೇದಿನ್ನಿ, ಮಾರುತಿ ಜಿನ್ನಾಪುರ, ಎಸ್.ದೇವೇಂದ್ರಗೌಡ, ಗಿರಿಲಿಂಗ ಸ್ವಾಮಿ ದೇವದುರ್ಗ, ಕಮ್ಯುನಿಸ್ಟ್ ಪಕ್ಷದ ಮಸ್ಕಿ ತಾಲ್ಲೂಕು ಘಟಕದ ಕಾರ್ಯದರ್ಶಿ ವೆಂಕಟೇಶ್ ನಾಯಕ್, ಮಾನವಿ ಘಟಕದ ಕಾರ್ಯದರ್ಶಿ ಯಲ್ಲಪ್ಪ ಉಟಕನೂರು, ಎಂ.ನಿರಂಜನ್, ಸಮರ, ಬಸವರಾಜಎಕ್ಕಿ, ಎಚ್.ಆರ್.ಹೊಸಮನಿ, ಮುದಿಯಪ್ಪ, ರಾಮಕೃಷ್ಣ ಮಾನ್ವಿ, ಹುಲಗಪ್ಪ ಬಳ್ಳಾರಿ ಭಾಗವಹಿಸಿದ್ದರು.