ADVERTISEMENT

ರಾಯಚೂರು: ರೇಸ್‌ ಕಾನ್ಸೆಫ್ಟ್‌ ಶಾಲೆ 10ನೇ ತರಗತಿ ಪರೀಕ್ಷೆಯಲ್ಲಿ ಪ್ರತಿಶತ ಸಾಧನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:42 IST
Last Updated 15 ಜುಲೈ 2020, 17:42 IST
ಸ್ವಾತಿ (ಶೇ 94.8)
ಸ್ವಾತಿ (ಶೇ 94.8)   

ರಾಯಚೂರು: ಕೇಂದ್ರೀಯ ಪಠ್ಯಕ್ರಮದ 10ನೇ ತರಗತಿ ಫಲಿತಾಂಶವು ಪ್ರಕಟವಾಗಿದ್ದು, ನಗರದ ರೇಸ್‌ ಕಾನ್ಸೆಪ್ಟ್‌ ಶಾಲೆಯ 119 ವಿದ್ಯಾರ್ಥಿಗಳೆಲ್ಲ ಉತ್ತೀರ್ಣರಾಗಿದ್ದಾರೆ. ಐದು ವಿದ್ಯಾರ್ಥಿಗಳು ಶೇ 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

ಒಟ್ಟು ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌, 52 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 21 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು 500 ಅಂಕಗಳಿಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT