ADVERTISEMENT

ರಾಹುಲ್‌ ಗಾಂಧಿಗೆ ಬುದ್ಧಿಭ್ರಮಣೆ ಆಗಿದೆ: ಪ್ರಹ್ಲಾದ್‌ ಜೋಶಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 11:53 IST
Last Updated 14 ಡಿಸೆಂಬರ್ 2019, 11:53 IST
ಸಚಿವ ಪ್ರಹ್ಲಾದ್ ಜೋಷಿ
ಸಚಿವ ಪ್ರಹ್ಲಾದ್ ಜೋಷಿ   

ರಾಯಚೂರು: ‘ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿಗೆ ಬುದ್ಧಿಭ್ರಮಣೆಯಾಗಿದೆ. ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಿಲ್ಲ. ರೇಪ್‌ ಇನ್‌ ಇಂಡಿಯಾ ಎಂದು ಹೇಳಿಕೆ ನೀಡಿರುವುದು ಅವರ ಮನಸ್ಥಿತಿ ಬಯಲು ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ರಾಯರ ಮಠದಲ್ಲಿ ಶನಿವಾರ ಆರಂಭವಾದ ಸುಧಾ ಮಂಗಳಮಹೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಮಾತನಾಡುತ್ತಿರುವ ರಾಹುಲ್‌ಗಾಂಧಿ ಪಾರ್ಟ್‌ ಟೈಮ್‌ ರಾಜಕಾರಣಿ ಇದ್ದಂತೆ. ಅವರ ಬಗ್ಗೆ ಕನಿಕರ ಮೂಡುತ್ತಿದೆ’ ಎಂದರು.

ADVERTISEMENT

‘2014 ರವರೆಗೂ ವಲಸೆ ಬಂದವರನ್ನು ದೇಶದ ನಾಗರಿಕರು ಎಂದು ಪರಿಗಣಿಸುವುದು ಪೌರತ್ವ ಮಸೂದೆ ಜಾರಿಯ ಉದ್ದೇಶವಾಗಿದೆ. ಆದರೆ, ಕಾಂಗ್ರೆಸ್‌ ಅನಗತ್ಯವಾಗಿ ಗೊಂದಲ ಮೂಡಿಸುತ್ತಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪೌರತ್ವ ಮಸೂದೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

‘ಮಳೆ ಹಾಗೂ ಪ್ರವಾಹ ಕಾರಣದಿಂದ ಈ ವರ್ಷ ಕಲ್ಲಿದ್ದಲು ಉತ್ಪಾದನೆ ಶೇ 5 ರಷ್ಟು ಕಡಿಮೆಯಾಗಿದೆ. ಬೇಸಿಗೆಯಲ್ಲಿ ಬೇಕಾಗುವ ಕಲ್ಲಿದ್ದಲ್ಲನ್ನು ರಾಜ್ಯಗಳು ಈಗಲೇ ದಾಸ್ತಾನು ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.