ADVERTISEMENT

ರಾಯಚೂರಿನಲ್ಲಿ ಮತ್ತೆ 6 ಮಂದಿಗೆ ಕೋವಿಡ್‌ ದೃಢ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 16:14 IST
Last Updated 16 ಜೂನ್ 2020, 16:14 IST

ರಾಯಚೂರು: ಜಿಲ್ಲೆಯಲ್ಲಿ ಮತ್ತೆ ಆರು ಮಂದಿಗೆ ಕೋವಿಡ್‌ ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 409 ಕ್ಕೆ ತಲುಪಿದೆ. ಅದರಲ್ಲಿ 137 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸದ್ಯ 270 ಜನರು ಆಸ್ಪತ್ರೆಯಲ್ಲಿದ್ದಾರೆ.

ಇದುವರೆಗೂ ಕೋವಿಡ್‌ನಿಂದ ಇಬ್ಬರು ಮೃತಪಟ್ಟಿದ್ದು ಹಾಗೂ ಸೋಂಕಿತರಲ್ಲಿ ಮೂವರು ಇತರೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

ಮಂಗಳವಾರ ಕೋವಿಡ್‌ ದೃಢವಾದವರಲ್ಲಿ 1 ವರ್ಷದ ಹೆಣ್ಣುಮಗು ಹಾಗೂ 12 ವರ್ಷದ ಬಾಲಕ ಮಹಾರಾಷ್ಟ್ರದಿಂದ ಬಂದವರು. ಕಲಬುರ್ಗಿಗೆ ಹೋಗಿ ಬಂದಿದ್ದ 21 ವರ್ಷ ಮಹಿಳೆಗೂ ಕೋವಿಡ್‌ ಬಂದಿದೆ. ಇನ್ನೂ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆಯರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ADVERTISEMENT

ಒಂದು ವರ್ಷದ ಹೆಣ್ಣುಮಗು ಲಿಂಗಸುಗೂರು ತಾಲ್ಲೂಕು ಗುಂತಗೋಳ ಗ್ರಾಮದ್ದು, 12 ವರ್ಷದ ಬಾಲಕನು ಲಿಂಗಸುಗೂರು ತಾಲ್ಲೂಕು ಮಲ್ಲಾಪುರ ಗ್ರಾಮಕ್ಕೆ ಸಂಬಂಧಿಸಿದ್ದು. ರಾಯಚೂರು ನಗರ ವ್ಯಾಪ್ತಿಯ ಮೂರು ಪ್ರಕರಣಗಳಿವೆ ಹಾಗೂ ಹೊಸೂರ ಗ್ರಾಮದ ಒಂದು ಪ್ರಕರಣ ಪತ್ತೆಯಾಗಿದೆ.

ಸ್ಯಾಂಪಲ್‌ಗಳ ವರದಿ: ಜಿಲ್ಲೆಯ ವಿವಿಧೆಡೆ 137 ಜನರ ಗಂಟಲು ದ್ರುವ ಮಾದರಿಗಳನ್ನು ಸಂಗ್ರಹಿಸಿ ಕಳುಹಿಸಿದ್ದು, ಒಟ್ಟು 445 ಮಾದರಿಗಳ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ. ಇದುವರೆಗೂ ಒಟ್ಟು 18,433 ಗಂಟಲು ದ್ರುವ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ 17,551 ಮಾದರಿಗಳ ವರದಿಗಳು ಬಂದಿವೆ.

ಜಿಲ್ಲೆಯ ಫಿವರ್‌ ಕ್ಲಿನಿಕ್‌ಗಳಲ್ಲಿ ಮಂಗಳವಾರ 363 ಜನರನ್ನು ತಪಾಸಣೆ ಮಾಡಲಾಗಿದ್ದು, ಒಟ್ಟು 27,177 ಜನರ ತಪಾಸಣೆ ಮಾಡಿದಂತಾಗಿದೆ. ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ 225 ಜನರು ಉಳಿದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.