ADVERTISEMENT

ರಾಯಚೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 10:35 IST
Last Updated 9 ಫೆಬ್ರುವರಿ 2026, 10:35 IST
   

ರಾಯಚೂರು: ಕೇಂದ್ರದ ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಎಪ್ಸ್ಟೀನ್ ಫೈಲ್‌ ಫೈಲ್‌ನಲ್ಲಿ ಮೋದಿ ಹೆಸರು ಉಲ್ಲೇಖವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಹಿತಾಸಕ್ತಿಯನ್ನೇ ಮಾರಾಟ ಮಾಡಿದ್ದಾರೆ ಎಂದು ಆರೋಪ ಮಾಡಿದರು.

ಕೇಂದ್ರ ಸರ್ಕಾರ ರಷ್ಯಾದ ಬದಲು ಅಮೆರಿಕದಿಂದ ತೈಲ ಖರೀದಿಸಲು ಶುರು ಮಾಡಿದರೆ ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಪ್ರಧಾನಿಗಳ ಮೇಲೆ ಗಂಭೀರ ಆರೋಪ ಮಾಡಲಾಗಿದೆ. ಆದರೆ, ಬಿಜೆಪಿ ಸರ್ಕಾರ ಸ್ಪಷ್ಠೀಕರಣ ನೀಡಲು ಸಿದ್ಧವಿಲ್ಲ ಎಂದು ಹೇಳಿದರು.

ADVERTISEMENT

ಭಾಗಿಯಾಗಿರುವ ಆರೋಪ ಮತ್ತು ಭಾರತದ ಘನತೆ ಮತ್ತು ಅಂತರ ರಾಷ್ಟ್ರೀಯ ಸ್ಥಾನಮಾನದ ಸಂಭಾವ್ಯ ರಾಜಿ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಎಪ್ಸ್ಟೀನ್ ಫೈಲ್‌ಗಳಿಂದ ಹೊರಹೊಮ್ಮುತ್ತಿರುವ ಗಂಭೀರ ಮತ್ತು ಗೊಂದಲದ ಬಹಿರಂಗಪಡಿಸುವಿಕೆಗಳನ್ನು ಖಂಡಿಸಿ ಕರ್ನಾಟಕ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದರು.

ಜಾಗತಿಕ ಪ್ರಭಾವ, ಬಲವಂತ ಮತ್ತು ಅಧಿಕಾರ ದುರುಪಯೋಗದ ಸಂಬಂಧವನ್ನು ಎಪ್ಸ್ಟೀನ್ ಫೈಲ್‌ಗಳು ಬಹಿರಂಗಪಡಿಸಿರುವೆ. ಇದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿವೆ. . ಭಾರತದ ಪ್ರಧಾನ ಮಂತ್ರಿಯ ಹೆಸರು ಉಲ್ಲೇಖ ಗಂಭೀರ ವಿಷಯವಾಗಿದೆ. ಇದು ನಮ್ಮ ದೇಶದ ವಿಶ್ವಾಸಾರ್ಹತೆ, ಸಾರ್ವಭೌಮತ್ವ ಮತ್ತು ಜಾಗತಿಕ ಚಿತ್ರಣದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರಕರಣದ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎತ್ತಿರುವ ಪ್ರಶ್ನೆಗಳಿಗೆ ಪ್ರಧಾನಮಂತ್ರಿ ಅವರು ಸ್ಪಷ್ಟ ಉತ್ತರ ನೀಡಬೇಕು. ಗಂಭೀರ ಆರೋಪಗಳ ಮುಂದೆ ಮೌನ ವಹಿಸುವುದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಾಗಿದೆ ಎಂದು ದೂರಿದರು.

ರಾಷ್ಟ್ರಕ್ಕಿಂತ ಯಾರೂ ದೊಡ್ಡವರಲ್ಲ, ಜಾಗತಿಕ ವೇದಿಕೆಯಲ್ಲಿ ಭಾರತದ ನೈತಿಕ ಅಧಿಕಾರವನ್ನು ರಾಜಿ ಮಾಡಿಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರ ಹಾಕಿದರು

ಸತ್ಯ ಬಹಿರಂಗವಾಗುವವರೆಗೆ ಮತ್ತು ಪ್ರಧಾನಮಂತ್ರಿ ದೇಶದ ಜನರಿಗೆ ಸ್ಪಷ್ಟ ಉತ್ತರ ನೀಡುವವರೆಗೆ ತನ್ನ ಪ್ರಜಾಸತ್ತಾತ್ಮಕ ಹೋರಾಟವನ್ನು ಮುಂದುವರಿಸುವುದಾಗಿ ಯುವ ಕಾಂಗ್ರೆಸ್ ನಾಯಕರು ಪುನರುಚ್ಚರಿಸಿದರು.

ಪ್ರತಿಭಟನೆಯಲ್ಲಿ ಯುವ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಮರಿಸ್ವಾಮಿ ಗಟ್ಟು, ಪ್ರಮುಖರಾದ ಮಹ್ಮದ್ ಶಹಬಾಜ್, ಬಿ.ಮಧುಕುಮಾರ, ಪ್ರತಾಪ ರೆಡ್ಡಿ, ಕೆ.ಇ.ಕುಮಾರ. ಶಿಪ್ಪು, ಸಾಗರ, ರಘು ಮಡಿವಾಳ, ಅಭಿ, ಅಜ್ಜು, ವಿಜಯಕುಮಾರ, ರವಿ ದುಗನೂರು, ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.