ADVERTISEMENT

ರಾಯಚೂರು| ಆಕಸ್ಮಿಕ ಬೆಂಕಿ: ಲಕ್ಷಾಂತರ ಮೌಲ್ಯದ ಹತ್ತಿ ಭಸ್ಮ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:57 IST
Last Updated 15 ನವೆಂಬರ್ 2025, 6:57 IST
ರಾಯಚೂರಿನ ಹೈದರಾಬಾದ್‌ ರಸ್ತೆಯಲ್ಲಿರುವ ಹತ್ತಿ ಫ್ಯಾಕ್ಟರಿಯಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು
ರಾಯಚೂರಿನ ಹೈದರಾಬಾದ್‌ ರಸ್ತೆಯಲ್ಲಿರುವ ಹತ್ತಿ ಫ್ಯಾಕ್ಟರಿಯಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು   

ರಾಯಚೂರು: ನಗರದ ಹೈದರಾಬಾದ್ ರಸ್ತೆಯಲ್ಲಿ ಬಾಲಾಜಿ ಹತ್ತಿ ಫ್ಯಾಕ್ಟರಿಯಲ್ಲಿ ಗುರುವಾರ ಸಂಜೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಕರಕಲಾಗಿದೆ.

ಬಾಲಾಜಿ ಆ್ಯಂಡ್ ಸನ್ಸ್ ಹತ್ತಿ ಫ್ಯಾಕ್ಟರಿಯಲ್ಲಿ 12 ಸಾವಿರ ಕ್ವಿಂಟಲ್ ಹತ್ತಿ ಶೇಖರಣೆ ಮಾಡಲಾಗಿತ್ತು. ಅದರಲ್ಲಿ 700 ಕ್ವಿಂಟಾಲ್ ಗೂ ಅಧಿಕ ಹತ್ತಿ ಬೆಂಕಿಗೆ ಸುಟ್ಟಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ

ಮಾರ್ಕೆಟ್ ಯಾರ್ಡ್ ಪೋಲಿಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.