ADVERTISEMENT

ರಾಯಚೂರು |DDPI ಕಚೇರಿ ಕಟ್ಟಡದಲ್ಲಿ ಬೆಂಕಿ: 50 ವರ್ಷದ ದಾಖಲೆಗಳು ಸುಟ್ಟು ಭಸ್ಮ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 13:32 IST
Last Updated 14 ಅಕ್ಟೋಬರ್ 2025, 13:32 IST
   

ರಾಯಚೂರು: ನಗರದ ತಹಶೀಲ್ದಾರ್‌ ಕಚೇರಿ ಸಮೀಪದ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಕಚೇರಿಯ ಹಳೆಯ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡು, ಸುಮಾರು 50 ವರ್ಷದ ಮಹತ್ವದ ಕಾಗದಪತ್ರಗಳು ಸುಟ್ಟು ಭಸ್ಮವಾಗಿವೆ.

ಕಿಡಿಗೇಡಿಗಳ ಕೃತ್ಯದಿಂದಾಗಿ ದಾಖಲೆಗಳು ಹಾಗೂ ಕೆಲ ಪೀಠೋಪಕರಣ ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಲ್ಲ ಕಿಡಿಗೇಡಿಗಳೇ ಬೆಂಕಿ ಹಚ್ಚಿದ್ದಾರೆ ಅಂತ ಡಿಡಿಪಿಐ ಕೆ.ಡಿ.ಬಡಿಗೇರ ದೂರಿದ್ದಾರೆ.

ಕಟ್ಟಡ ಹಳೆಯದಾಗಿರುವ ಕಾರಣ ಡಿಡಿಪಿಐ ಕಚೇರಿಯನ್ನು ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಿಸಲಾಗಿದೆ. ಮೂರು ವರ್ಷಗಳಿಂದ ಹಳೆಯ ಕಟ್ಟಡದಲ್ಲಿ ಯಾವುದೇ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಕೇವಲ ಹಳೆಯ ದಾಖಲೆಗಳನ್ನು ಮಾತ್ರ ಇಡಲಾಗಿತ್ತು.

ADVERTISEMENT

ಸದರ್‌ ಬಜಾರ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.