ADVERTISEMENT

ರಾಯಚೂರು: ಪತ್ನಿ ಮೇಲಿನ ಶಂಕೆಗೆ ಮಕ್ಕಳಿಬ್ಬರನ್ನು ಕೊಂದ ತಂದೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 8:30 IST
Last Updated 12 ಫೆಬ್ರುವರಿ 2023, 8:30 IST
ಆರೋಪಿ ನಿಂಗಪ್ಪ
ಆರೋಪಿ ನಿಂಗಪ್ಪ   

ರಾಯಚೂರು: ಪತ್ನಿ ಮೇಲೆ ಅನೈತಿಕ ಸಂಬಂಧದ ಆರೋಪ ಮಾಡಿದ ವ್ಯಕ್ತಿಯೊಬ್ಬ ತನ್ನ ಇಬ್ಬರು ಗಂಡು ಮಕ್ಕಳನ್ನು ಶನಿವಾರ ಕತ್ತು ಹಿಸುಕಿ ಸಾಯಿಸಿದ ಘಟನೆಯು ದೇವದುರ್ಗ ತಾಲ್ಲೂಕಿನ ಜಕ್ಲೇರದೊಡ್ಡಿ ಗ್ರಾಮದಲ್ಲಿ ನಡೆದಿರುವುದು ಭಾನುವಾರ ಬೆಳಕಿಗೆ ಬಂದಿದೆ.

ಶಿವರಾಜ ನಿಂಗಪ್ಪ (5) ಮತ್ತು ರಾಘವೇಂದ್ರ ನಿಂಗಪ್ಪ (3) ಮುಗ್ಧ ಮಕ್ಕಳಿಬ್ಬರು ಶಂಕಿತ ವ್ಯಕ್ತಿತ್ವದ ತಂದೆಯಿಂದ ಪ್ರಾಣಬಿಟ್ಟಿವೆ. ಶನಿವಾರ ಮಧ್ಯರಾತ್ರಿಯೇ ದೇವದುರ್ಗ ಪೊಲೀಸ್‌ ಠಾಣೆಗೆ ಧಾವಿಸಿ ಪತಿ ನಿಂಗಪ್ಪನ ವಿರುದ್ಧ ಪತ್ನಿ ಪ್ರಭಾವತಿ ಅವರು ದೂರು ಸಲ್ಲಿಸಿದ್ದಾರೆ.

ಮಕ್ಕಳಿಬ್ಬರು ತನಗೆ ಹುಟ್ಟಿಲ್ಲ, ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ನಿಂಗಪ್ಪ ನಿಂದನೆ ಮಾಡಿದ್ದಲ್ಲದೆ, ಎಲ್ಲರನ್ನು ಕತ್ತು ಹಿಸುಕಿ ಕೊಲ್ಲುವುದಾಗಿ ಬೆದರಿಕೆವೊಡ್ಡಿದ್ದ ಎಂಬುದನ್ನು ದೂರಿನಲ್ಲಿ ಪ್ರಭಾವತಿ ತಿಳಿಸಿದ್ದಾರೆ.

ADVERTISEMENT

ಕೆ.ಇರಬಗೇರಾ ಗ್ರಾಮದಲ್ಲಿದ್ದ ಮಕ್ಕಳಿಬ್ಬರನ್ನು ಜಕ್ಲೇರದೊಡ್ಡಿಗೆ ಕರೆತಂದು ಕತ್ತು ಹಿಸುಕಿ ಸಾಯಿಸಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.