ಕವಿತಾಳ: ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮೂರು ದಿನಗಳಿಂದ ಆಗಾಗ ಮಳೆ ಸುರಿಯುತ್ತಿದೆ. ಜಿಟಿ ಜಿಟಿ ಮಳೆಗೆ ಇಲ್ಲಿನ ರಾಯಚೂರು ಲಿಂಗಸುಗೂರು ರಾಜ್ಯ ಹೆದ್ದಾರಿ ಕೆಸರು ಗದ್ದೆಯಂತಾಗಿದ್ದು ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗುತ್ತಿದೆ.
ಸಂತೆ ಬಜಾರ್ ಕ್ರಾಸ್‌ನಿಂದ ಹಳೆ ಬಸ್ ನಿಲ್ದಾಣದವರೆಗೆ ರಸ್ತೆಯಲ್ಲಿ ತಗ್ಗುಗಳು ಬಿದ್ದಿವೆ. ಅದರಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಗುಂಡಿಯಲ್ಲಿ ಮತ್ತು ಕೆಸರಿನಲ್ಲಿ ಬೀಳುತ್ತಿದ್ದಾರೆ. ಸರಕು ತುಂಬಿದ ಬೃಹತ್ ಗಾತ್ರದ ಲಾರಿಗಳು ಮತ್ತು ಬಸ್‌ಗಳು ಗುಂಡಿಗೆ ಇಳಿಯುವ ಪರಿಣಾಮ ಓಲಾಡುತ್ತಾ ಸಾಗುತ್ತಿವೆ. ಇದರಿಂದ ಆತಂಕ ಎದುರಾಗಿದೆ.
‘ಅವೈಜ್ಞಾನಿಕ ವಿಭಜಕ ನಿರ್ಮಾಣದಿಂದ ರಸ್ತೆ ಕಿರಿದಾಗಿ ವಾಹನ ಸವಾರರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಯಾದರೆ ಕೆಸರು, ಬಿಸಿಲು ಬಿದ್ದರೆ ದೂಳು ಹೀಗೆ ಮಲ್ಲದಗುಡ್ಡ ಕ್ರಾಸ್‌ನಿಂದ ಮಸ್ಕಿ ಕ್ರಾಸ್ ವರೆಗೆ ವಾಹನ ಸಂಚರಿಸುವುದು ಕಷ್ಟವಾಗಿದೆ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಬೇಕುʼ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮೌನೇಶ ಹಿರೇಕುರಬರ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.