ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ) : ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ ಧಾರುವಾಲ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಣಿ ಕಂಪನಿ ನಿರ್ದೇಶಕಿ ಶಿಲ್ಪಾ ಆರ್. ಧ್ವಜಾರೋಹಣ ಮಾಡಲು ಹಗ್ಗ ಎಳೆದಾಗ ಧ್ವಜ ಬಿಚ್ಚಿಕೊಳ್ಳಲಿಲ್ಲ. ಶಿಲ್ಪಾ ಅವರು ನಾಲ್ಕೈದು ಬಾರಿ ಹಗ್ಗ ಎಳೆದರೂ ಧ್ವಜ ಬಿಚ್ಚಿಕೊಳ್ಳದಿದ್ದಾಗ ಅದನ್ನು ಪುನಃ ಕೆಳಿಗಿಳಿಸಿ ಸರಿಪಡಿಸಿ ಧ್ವಜಾರೋಹಣ ಮಾಡಲಾಯಿತು.
ಧ್ವಜ ಹಾರಾಡದ ಕಾರಣ ರಾಷ್ಟ್ರ ಗೀತೆಯನ್ನು ಎರಡು ಬಾರಿ ಹಾಡಲಾಯಿತು. ಇದು ಜನರ ಆಕ್ರೋಶಕ್ಕೆ ಕಾರಣವಾಯಿತು.
ಗಣಿ ಕಂಪನಿ ನಿರ್ದೇಶಕಿ ಶಿಲ್ಪಾ ಆರ್. ಅವರು ನಿಗದಿತ ಸಮಯಕ್ಕೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಶಿಲ್ಪಾ ಆರ್ ಅವರ ಬರುವಿಕೆಗಾಗಿ ಕಾದು ಕುಳಿತುಕೊಳ್ಳಬೇಕಾಯಿತು. ಅಧಿಕಾರಿಯ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.