ADVERTISEMENT

ಉತ್ಸವದ ಕಾರ್ಯಕ್ರಮಗಳು ಫೆ. 7ರವರೆಗೆ ನಿರಂತರ ನಡೆಯಲಿ: ಜಿಲ್ಲಾಧಿಕಾರಿ ನಿತೀಶ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 7:11 IST
Last Updated 17 ಜನವರಿ 2026, 7:11 IST
<div class="paragraphs"><p> ಸಭೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ. ಮಾತನಾಡಿದರು</p></div>

ಸಭೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ. ಮಾತನಾಡಿದರು

   

ರಾಯಚೂರು: ‘ಈ ಮೊದಲು ನಿರ್ಧರಿಸಿದ್ದ ರಾಯಚೂರು ಜಿಲ್ಲಾ ಉತ್ಸವದ ಎಲ್ಲ ಕಾರ್ಯಕ್ರಮಗಳು ಫೆಬ್ರುವರಿ 5, 6 ಮತ್ತು 7ರವರೆಗೆ ನಿರಂತರವಾಗಿ ನಡೆಯುವಂತೆ ಕಾರ್ಯ ಯೋಜನೆ ರೂಪಿಸಿ ಕಾರ್ಯ ಪ್ರವೃತ್ತರಾಗಬೇಕು’ ಎಂದು ರಾಯಚೂರು ಉತ್ಸವ ಆಚರಣಾ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಿತೀಶ್ ಕೆ. ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ನೂತನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮತ್ತೊಂದು ಸುತ್ತಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ADVERTISEMENT

‘ಈಗಾಗಲೇ ಬೇರೆ ಬೇರೆ ದಿನಾಂಕಗಳಂದು ನಿಗದಿಯಾದ ಕಾರ್ಯಕ್ರಮಗಳನ್ನು ಯಥಾ ರೀತಿಯಲ್ಲಿ ನಡೆಸಬೇಕು’ ಎಂದರು.

‘ಉತ್ಸವದ ಸಿದ್ಧತೆಗೆ ಇದೀಗ ಸ್ವಲ್ಪ ದಿನಗಳ ಕಾಲಾವಕಾಶ ಲಭಿಸಿದೆ. ಕೆಲವು ಸ್ಪರ್ಧೆಗಳಲ್ಲಿ ಮಾತ್ರ ಮಾರ್ಪಾಡುಗಳಾಗಲಿವೆ. ಇನ್ನುಳಿದಂತೆ ಯಾವುದೇ ಬದಲಾವಣೆಗಳು ಇರುವುದಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ವಿರಮಿಸದೇ ನಿರಂತರವಾಗಿ ಉತ್ಸವದ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಬೇಕು’ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.