
ಮಸ್ಕಿ: ರಾಯಚೂರು ಉತ್ಸವದ ಲಾಂಛನದಲ್ಲಿ ಕೊನೆಗೂ ಐತಿಹಾಸಿಕ ಮಸ್ಕಿಗೆ ಸ್ಥಾನ ಲಭಿಸಿದೆ. ಕರಡು ಪ್ರತಿಗಾಗಿ ಸಿದ್ಧಪಡಿಸಿದ ಲಾಂಛನದಲ್ಲಿ ಮಸ್ಕಿಯ ಐತಿಹಾಸಿಕ ಮಹತ್ವ ಸಾರುವ ಅಶೋಕ ಶಿಲಾಶಾಸನ ಸೇರಿ ಯಾವುದೇ ಚಿಹ್ನೆ ಇಲ್ಲದಿರುವುದನ್ನು ಗಮನಿಸಿದ ಶಾಸಕ ಆರ್. ಬಸನಗೌಡ ತುರ್ವಿಹಾಳ ಮಸ್ಕಿಯ ಶಿಲೆಯನ್ನು ಸೇರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದ್ದರು.
ಮಸ್ಕಿ ಅಶೋಕ ಶಿಲಾಶಾಸನದಿಂದ ಜಗತ್ತಿನ ಗಮನ ಸೆಳೆದ ಐತಿಹಾಸಿಕ ಸ್ಥಳವಾಗಿದ್ದು ಲಾಂಛನದಲ್ಲಿ ಅದರ ಪ್ರತಿಬಿಂಬ ಅಥವಾ ‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’ (ಎನ್‌ಸಿ ಆರ್‌ಟಿಸಿ) ಬಳಸಿಕೊಂಡಿರುವ ಮಸ್ಕಿಯ ಮಲ್ಲಿಕಾರ್ಜುನ ದೇವಸ್ಥಾನದ ಗೋಡೆ ಮೇಲಿನ ಮೂರು ಮುಖದ ಹಂಸ ಚಿತ್ರದ ಅಗತ್ಯವಿದೆ ಎಂದು ಅವರು ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದರು.
ಮಸ್ಕಿ ಬೆಟ್ಟದ ಮೇಲಿರುವ ಮಲ್ಲಿಕಾರ್ಜುನ ದೇವಸ್ಥಾನದ ಗೋಡೆಯ ಮೇಲಿನ ಮೂರು ಮುಖದ ಹಂಸ ಚಿತ್ರವನ್ನು ಒಳಗೊಂಡ ಮತ್ತೊಂದು ಲಾಂಛನವನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.