ADVERTISEMENT

ರಾಯಚೂರಿಗೆ ಉದ್ಯಾನ ಎಕ್ಸ್‌ಪ್ರೆಸ್‌: ಪೊಲೀಸರ ನಿಗಾ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 17:00 IST
Last Updated 1 ಜೂನ್ 2020, 17:00 IST
ರಾಯಚೂರು ರೈಲು ನಿಲ್ದಾಣದಲ್ಲಿ ನಿಗಾ ವಹಿಸಿರುವ ಪೊಲೀಸರು
ರಾಯಚೂರು ರೈಲು ನಿಲ್ದಾಣದಲ್ಲಿ ನಿಗಾ ವಹಿಸಿರುವ ಪೊಲೀಸರು    

ರಾಯಚೂರು: ಮುಂಬೈನಿಂದ ಹೊರಟ ಉದ್ಯಾನ ಎಕ್ಸ್‌ಪ್ರೆಸ್‌ ರೈಲು ರಾಯಚೂರು ರೈಲು ನಿಲ್ದಾಣವನ್ನು ರಾತ್ರಿ 10.30 ಕ್ಕೆ ತಲುಪಲಿದ್ದು, ಪೊಲೀಸರು ಈಗಾಗಲೇ ನಿಗಾ ವಹಿಸಿದ್ದಾರೆ.

ಮುಂಬೈನಿಂದ 24 ಜನರು ಬರಲಿದ್ದಾರೆ. ಆನಂತರ ತಿರುಪತಿ-ನಿಜಾಮುದ್ದೀನ್ ರೈಲು ಬರಲಿದ್ದು, ಆಂಧ್ರಪ್ರದೇಶದಿಂದ 46 ಜನರು ರಾಯಚೂರಿಗೆ ‌ಬರಲಿದ್ದಾರೆ.

ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗುವುದು. ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.