ADVERTISEMENT

ಅಕಾಲಿಕ ಮಳೆ: ಬೆಳೆ ಹಾನಿ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 16:34 IST
Last Updated 9 ಏಪ್ರಿಲ್ 2020, 16:34 IST
ಕವಿತಾಳ ಸಮೀಪದ ಹಾಲಾಪುರದಲ್ಲಿ ಮಳೆಯಿಂದ ಹಾಳಾದ ಭತ್ತದ ಬೆಳೆಯನ್ನು ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಪರಿಶೀಲಿಸಿದರು (ಎಡಚಿತ್ರ). ಸಿಂಧನೂರು ತಾಲ್ಲೂಕಿನ ಚನ್ನಳ್ಳಿ ಗ್ರಾಮಗಳಲ್ಲಿ ಮಳೆಯಿಂದ ಹಾನಿಯಾದ ಭತ್ತ ಬೆಳೆಯನ್ನು ಶಾಸಕ ವೆಂಕಟರಾವ್ ನಾಡಗೌಡ ಗುರುವಾರ ವೀಕ್ಷಿಸಿದರು

ಕವಿತಾಳ: ಮಸ್ಕಿ ತಾಲ್ಲೂಕಿನ ಹಾಲಾಪುರ ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ ಹಾಳಾಗಿರುವ ಭತ್ತದ ಬೆಳೆಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಗುರುವಾರ ಪರಿಶೀಲಿಸಿದರು.

‘ಹಾಲಾಪುರ ಸೇರಿ ಸುತ್ತಮುತ್ತಲಿನ ಹಳ್ಳಿಗಳ ವ್ಯಾಪ್ತಿಯಲ್ಲಿ ಕಟಾವು ಹಂತದಲ್ಲಿನ ಭತ್ತದ ಬೆಳೆ ಗಾಳಿ ಮತ್ತು ಧಾರಾಕಾರ ಮಳೆಗೆ ಬಹುತೇಕ ನೆಲ ಕಚ್ಚಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹಾಳಾದ ಬೆಳೆಗಳ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಕೃಷಿ ಸಹಾಯಕ ಅಮರೇಗೌಡ ಮತ್ತು ಗ್ರಾಮಲೆಕ್ಕಿಗ ಅಬೂಬಕರ್ ತಿಳಿಸಿದರು.

ಕಟಾವು ಹಂತದಲ್ಲಿನ ಬೆಳೆ ನೆಲಕಚ್ಚಿರುವುದು ಮತ್ತು ಲಾಕ್‍ಡೌನ್‍ನಿಂದ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಟಾವು ಮಾಡಿದ ಭತ್ತವನ್ನು ಬಯಲಿನಲ್ಲಿ ಹಾಕಿಕೊಂಡು ಕುಳಿತಿದ್ದೇವೆ. ಸರ್ಕಾರ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರಾದ ಬಸ್ಸಯ್ಯಸ್ವಾಮಿ ಮತ್ತು ರಂಗಪ್ಪ ಭೋವಿ ಮನವಿ ಮಾಡಿದರು.

ADVERTISEMENT

ಸಿಬ್ಬಂದಿ ಚಂದಪ್ಪ ನಾಯಕ ಮತ್ತು ಮುದುಕಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.