ಕವಿತಾಳ (ರಾಯಚೂರು): ಮಳೆಗಾಗಿ ಪ್ರಾರ್ಥಿಸಲು ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಇಲ್ಲಿನ ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಪಾಲ್ಗೊಂಡಿದ್ದರು.
ಹಿಂದೂ, ಮುಸ್ಲಿಂ ಸಮಾಜದ ರೈತರು ನಡಿಗೆ ಮೂಲಕ ಲಿಂಗದಹಳ್ಳಿಗೆ ತೆರಳಿ ಕೃಷ್ಣಾ ನದಿ ನೀರು ತಂದು ಇಲ್ಲಿನ ಐದು ದರ್ಗಾಗಳಿಗೆ ಪವಿತ್ರಜಲ ಅರ್ಪಿಸಿ ಮಳೆಗಾಗಿ ಪ್ರಾರ್ಥಿಸಿದರು.
ದರ್ಗಾಕ್ಕೆ ಭೇಟಿ ನೀಡಿದ ಸ್ವಾಮೀಜಿ ಭಕ್ತರಿಗೆ ಸಿಹಿ ಮಾದಲಿ ವಿತರಿಸಿ, ‘ಉತ್ತಮ ಮಳೆ, ಬೆಳೆಗಾಗಿ ದರ್ಗಾಗಳಲ್ಲಿ ಪೂಜೆ ಸಲ್ಲಿಸಿದ ರೈತರ ಆಸೆ ಫಲಿಸಲಿ’ ಎಂದು ಹಾರೈಸಿದರು.
ಮುಖಂಡರಾದ ಕಿರಲಿಂಗಪ್ಪ, ಶರಣಬಸವ ಹಣಿಗಿ, ರಾಜೇಶ ಬನ್ನಿಗಿಡದ, ಖಾಜಾಪಾಶಾ ಬ್ಯಾಗವಾಟ್, ಚಾಂದಪಾಶಾ, ರಫಿ ಒಂಟಿಬಂಡಿ, ಯಲ್ಲಪ್ಪ ಕೊಡ್ಲಿ, ಆಜಂಪಾಶಾ ಧಣಿ, ಶ್ರೀನಿವಾಸ ಗುತ್ತೇದಾರ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.