ADVERTISEMENT

ಮಸ್ಕಿ: ಮಲ್ಲಿಕಾರ್ಜುನ ದೇವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 7:06 IST
Last Updated 6 ಫೆಬ್ರುವರಿ 2023, 7:06 IST
ಮಸ್ಕಿಯಲ್ಲಿ ಭಾನುವಾರ ಮಲ್ಲಿಕಾರ್ಜುನ ದೇವರ ರಥೋತ್ಸವ ಜರುಗಿತು
ಮಸ್ಕಿಯಲ್ಲಿ ಭಾನುವಾರ ಮಲ್ಲಿಕಾರ್ಜುನ ದೇವರ ರಥೋತ್ಸವ ಜರುಗಿತು   

ಮಸ್ಕಿ: ಭಾನುವಾರ ಇಲ್ಲಿಯ ಮಲ್ಲಿಕಾ ರ್ಜುನ ದೇವರ ಮಹಾ ರಥೋ ತ್ಸವ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ ಮಲ್ಲಿಕಾರ್ಜುನ ದೇವ ಸ್ಥಾನದಲ್ಲಿ ಈಶ್ವರ ಲಿಂಗಕ್ಕೆ ಮಹಾ ಅಭಿಷೇಕ ಮಾಡಲಾಯಿತು.

ವಿವಿಧ ಧಾರ್ಮಿಕ ಕಾರ್ಯಕ್ರ ಮಗಳು ನಡೆದವು. ನಂತರ ರಥಕ್ಕೆ ಕಳಸಾರೋಹಣ ಮಾಡಲಾಯಿತು.

ADVERTISEMENT

ಸಂಜೆ 5ಕ್ಕೆ ಪಲ್ಲಕ್ಕಿಯಲ್ಲಿ ಮಲ್ಲಿಕಾರ್ಜುನ ದೇವರ ಉತ್ಸವ ಮೂರ್ತಿ ಇಡಲಾಯಿತು. ಬಳಿಕ ರಥದ ಸುತ್ತ ಐದು ಬಾರಿ ಪ್ರದಕ್ಷಿಣೆ ಹಾಕಿ ನಂತರ ಮೂರ್ತಿಯನ್ನು ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ಭಕ್ತರು ಉತ್ತುತ್ತಿ ಹಾಗೂ ಬಾಳೆ ಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು.

ಗಚ್ಚಿನ ಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ 150 ವರ್ಷ ಗಳಷ್ಟು ಹಳೆಯದಾದ ಕಟ್ಟಿಗೆಯ ಮಹಾ ರಥಕ್ಕೆ ಪೂಜೆ ಸಲ್ಲಿಸಿ ರಥೋ ತ್ಸವಕ್ಕೆ ಚಾಲನೆ ನೀಡಿದರು.

ರಥವನ್ನು ಸಾವಿರಾರು ಭಕ್ತರು ಎಳೆದರು. ರಥವನ್ನು ದೈವದ ಕಟ್ಟೆವರೆಗೆ ಎಳೆದು ವಾಪಸ್ ದೇವಸ್ಥಾನದ ಮುಂಭಾಗಕ್ಕೆ ತರಲಾಯಿತು.

ಭೋವಿ (ವಡ್ಡರ್) ಸಮಾಜದ ಅನೇಕ ಯುವಕರು ಇಡೀ ದಿನ ಉಪವಾಸ ಹಾಗೂ ಮಡಿವಂತಿಕೆಯಿಂದ ತೇರಿನ ಕೆಳಗೆ ಇದ್ದು ರಥಕ್ಕೆ ಸೊನ್ನೆ ಹಾಕುವ ಮೂಲಕ ರಥೋತ್ಸವದ ಯಶಸ್ಸಿಗೆ ಕಾರಣರಾದರು.

ರಥೋತ್ಸವದಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ದೇವಸ್ಥಾನ ಸಮಿತಿ ಮುಖಂಡ ಕೆ.ವೀರನಗೌಡ, ಮ ಹಾದೇವಪ್ಪಗೌಡ ಪೊಲೀಸ್ ಪಾಟೀಲ, ಎಚ್.ಬಿ.ಮುರಾರಿ, ಸದಸ್ಯರು ಹಾಗೂ ಮುಖಂಡರು ಸೇರಿ ಸುತ್ತಮುತ್ತಲ ಗ್ರಾಮಗಳ ಜನ ಭಾಗವಹಿಸಿದ್ದರು.ಸಿಪಿಐ ಸಂಜೀವ್ ಬಳಿಗಾರ, ಪಿಎಸ್ಐ ಸಿದ್ಧರಾಮ ಬಿದರಾಣಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.