ADVERTISEMENT

ವಿಜೃಂಭಣೆಯ ಸಾಧು ಮಹಾರಾಜರ ಉಚ್ಚಾಯ

​ಪ್ರಜಾವಾಣಿ ವಾರ್ತೆ
Published 24 ಮೇ 2023, 13:42 IST
Last Updated 24 ಮೇ 2023, 13:42 IST
ತುರ್ವಿಹಾಳ ಪಟ್ಟಣದಲ್ಲಿ ಈಚೆಗೆ ಸಾಧು ಮಹಾರಾಜರ ಜಾತ್ರೆಯ ನಿಮಿತ್ತ ಉಚ್ಚಾಯ ಜರುಗಿತು
ತುರ್ವಿಹಾಳ ಪಟ್ಟಣದಲ್ಲಿ ಈಚೆಗೆ ಸಾಧು ಮಹಾರಾಜರ ಜಾತ್ರೆಯ ನಿಮಿತ್ತ ಉಚ್ಚಾಯ ಜರುಗಿತು   

ತುರ್ವಿಹಾಳ: ಪಟ್ಟಣದ ಆರಾಧ್ಯ ದೇವ ಸಾಧು ಮಹಾರಾಜರ ಐದನೇ ವರ್ಷದ ಜಾತ್ರೆ ಮಹೋತ್ಸವ ಪುಣ್ಯಸ್ಮರಣೆ ಕಾರ್ಯಕ್ರಮವು ಮಂಗಳವಾರ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ಸಾಧು ಮಹಾರಾಜ ತಾತನ ದೇವಸ್ಥಾನಕ್ಕೆ ಕಳಸಾರೋಹಣ, ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ನಡೆಯಿತು. ಸಂಜೆ ತಾತನ ದೇವಸ್ಥಾನದಿಂದ ಸುಂಕಲಮ್ಮ ದೇವಸ್ಥಾನದವರೆಗೆ ಉಚ್ಚಾಯ ಡೊಳ್ಳು ಕಳಸದೊಂದಿಗೆ ನಡೆಯಿತು.

ಮುಖಂಡರಾದ ಸಿದ್ದಯ್ಯ ಗುರುವಿನ್, ಮಾದಯ್ಯ ಗುರುವಿನ್, ಅಮರಗುಂಡಯ್ಯ ತಾತ, ಗುಂಡಯ್ಯ ತಾತ, ಮಲ್ಲನಗೌಡ ದೇವರಮನಿ, ಮಂಟೇಪ್ಪ ಎಲೆಕೂಡ್ಲಿಗಿ, ಮೌಲಪ್ಪಯ್ಯ ಗುತ್ತೇದಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ಫಕೀರಪ್ಪ ಬಂಗಿ, ರಾಮಣ್ಣ ಕಣ್ಣೂರ್. ಕರಿಯಪ್ಪ ವಿರುಪಾಪುರ, ಸಿದ್ದೇಶ್ವರ ವಕೀಲರು, ಶಿವನಗೌಡ ದೇವರಮನಿ, ಯಂಕಣ್ಣ ಉಪ್ಪಳ, ನಾಗರಾಜ ಗದ್ಯಾಳ, ಮಾರ್ಕಂಡೆಪ್ಪ ಬಡಿಗೇರ, ಸಾಧು ಮಹಾರಾಜ ಸೇವಾ ಸಮಿತಿ ಸದಸ್ಯರಾದ, ಶರಣಪ್ಪ ಕಂರೆಡ್ಡಿ, ಬಸವರಾಜ ಪೊಲೀಸ್ ಪಾಟೀಲ್, ನಿಂಗಪ್ಪ ಜಾನೇಕಲ್, ಹನುಮಂತ ಬಳಗಾನೂರ, ಶಿವರಾಯಪ್ಪ ನಾಗರಬೆಂಚಿ, ಚಂದ್ರಪ್ಪಗೌಡ, ಬಸವರಾಜ, ರುದ್ರೇಶ ಸಿದ್ದಾಪುರ ಹಾಗೂ ಗ್ರಾಮಸ್ಥರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.