ADVERTISEMENT

ಲಿಂಗಸುಗೂರು: ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಮನವಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 14:36 IST
Last Updated 13 ಸೆಪ್ಟೆಂಬರ್ 2024, 14:36 IST
ಲಿಂಗಸುಗೂರಲ್ಲಿ ಶುಕ್ರವಾರ ಮುದಗಲ್ಲ ಪಟ್ಟಣದ ಪ್ರಮುಖ ರಸ್ತೆಗಳ ಸುಧಾರಣೆಗೆ ಆಗ್ರಹಿಸಿ ಪುರಸಭೆ ಉಪಾಧ್ಯಕ್ಷ ಅಜ್ಮಿರ್ ಬೆಳ್ಳಿಕಟ್‍ ನೇತೃತ್ವದಲ್ಲಿ ಲೊಕೋಪಯೋಗಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು
ಲಿಂಗಸುಗೂರಲ್ಲಿ ಶುಕ್ರವಾರ ಮುದಗಲ್ಲ ಪಟ್ಟಣದ ಪ್ರಮುಖ ರಸ್ತೆಗಳ ಸುಧಾರಣೆಗೆ ಆಗ್ರಹಿಸಿ ಪುರಸಭೆ ಉಪಾಧ್ಯಕ್ಷ ಅಜ್ಮಿರ್ ಬೆಳ್ಳಿಕಟ್‍ ನೇತೃತ್ವದಲ್ಲಿ ಲೊಕೋಪಯೋಗಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು   

ಲಿಂಗಸುಗೂರು: ‘ತಾಲ್ಲೂಕಿನ ಮುದಗಲ್ಲ ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿನ ಆಳವಾದ ತಗ್ಗು, ಗುಂಡಿಗಳನ್ನು ಮುಚ್ಚಿ ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿ’ ಎಂದು ಆಗ್ರಹಿಸಿ ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ಗುತ್ತೆದಾರ ಬರೆದ ಪತ್ರವನ್ನು ಸದಸ್ಯರು ಲೊಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಸಲ್ಲಿಸಿ ಮನವಿ ಮಾಡಿದರು.

ಶುಕ್ರವಾರ ಲೊಕೋಪಯೋಗಿ ಇಲಾಖೆ ಅಧಿಕಾರಿಯನ್ನು ಭೇಟಿ ಮಾಡಿದ್ದ ತಂಡ, ‘ರಾಯಚೂರು–ಬೆಳಗಾವಿ ಮುಖ್ಯ ರಸ್ತೆ ಪಟ್ಟಣ ವ್ಯಾಪ್ತಿಯಲ್ಲಿ ಸಂಪೂರ್ಣ ಹಾಳಾಗಿದೆ. ಪುರಸಭೆಯಲ್ಲಿ ದುರಸ್ತಿಗೆ ಅನುದಾನ ಕೊರತೆಯಿದ್ದು ಇಲಾಖೆ ಅನುದಾನದಲ್ಲಿ ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪಾಧ‍್ಯಕ್ಷ ಅಜ್ಮಿರ್ ಬೆಳ್ಳಿಕಟ್‍, ಸದಸ್ಯರಾದ ಮಹಿಬೂಬ್ ಬಾರಿಗಿಡದ, ಹುಸೇನ್‍ ಅಲಿ, ಹಸನ್‍ ಕವಾ, ಮುಜಾಕೀರ್ ಹುಸೇನ್‍ ಹಾಗೂ ಮುಖಂಡ ತಮ್ಮಣ್ಣ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.