ADVERTISEMENT

ಸಿಂಧನೂರು | ರಸ್ತೆ ಅಪಘಾತ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 15:33 IST
Last Updated 10 ಡಿಸೆಂಬರ್ 2023, 15:33 IST
ದೇವರಾಜ ಈರಪ್ಪ, ಸಂತೋಷಕುಮಾರ ಹನುಮಂತ
ದೇವರಾಜ ಈರಪ್ಪ, ಸಂತೋಷಕುಮಾರ ಹನುಮಂತ   

ಸಿಂಧನೂರು: ತಾಲ್ಲೂಕಿನ ಮುದ್ದಾಪುರ ಬಳಿ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರವಾಹನದ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೂತಲದಿನ್ನಿಯ ದೊಡ್ಲಾ ಹಾಲಿನ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕುನ್ನಟಗಿ ಕ್ಯಾಂಪಿನ ದೇವರಾಜ ಈರಪ್ಪ(23), ಮಲ್ಲಾಪುರದ ಸಂತೋಷ ಕುಮಾರ ಹನುಮಂತ(22) ಮೃತರು.

ಹಾಲಿನ ಡೇರಿಯ ಕೆಲಸದ ಪ್ರಯುಕ್ತ ಮಸ್ಕಿಗೆ ಹೋಗಿ ಮರಳಿ ಬರುವಾಗ ಹೊಸಪೇಟೆಯಿಂದ ಸಿಂಧನೂರು ಮಾರ್ಗವಾಗಿ ಕಲಬುರಗಿಗೆ  ತೆರಳುತ್ತಿದ್ದ ಸಾರಿಗೆ ಬಸ್‍, ಚಾಲಕನ ನಿಯಂತ್ರಣತಪ್ಪಿ ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

ADVERTISEMENT

ಮೃತ ಯುವಕರು ಸ್ನೇಹಿತರಾಗಿದ್ದರು. ಇಬ್ಬರೂ ಸಾವಿನಲ್ಲೂ ಒಂದಾಗಿರುವುದು ಅವರ ಕುಟುಂಬಗಳ ನೋವು ಹೆಚ್ಚಿಸಿದೆ. ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯ ಪಿಎಸ್‍ಐ ಹುಸೆನಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.