ADVERTISEMENT

ಜಾಲಹಳ್ಳಿ | ಚರಂಡಿಯಂತಾದ ರಸ್ತೆ: ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 6:23 IST
Last Updated 11 ಸೆಪ್ಟೆಂಬರ್ 2025, 6:23 IST
ಜಾಲಹಳ್ಳಿ ಸಮೀಪದ ಬಿ.ಆರ್.ಗುಂಡ ಗ್ರಾಮದಲ್ಲಿ ರಸ್ತೆ ಕೆಸರು ಗದ್ದೆಯಂತಾಗಿರುವುದು
ಜಾಲಹಳ್ಳಿ ಸಮೀಪದ ಬಿ.ಆರ್.ಗುಂಡ ಗ್ರಾಮದಲ್ಲಿ ರಸ್ತೆ ಕೆಸರು ಗದ್ದೆಯಂತಾಗಿರುವುದು   

ಜಾಲಹಳ್ಳಿ: ‘ಸಮೀಪದ ಬಿ.ಆರ್‌.ಗುಂಡ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ರಸ್ತೆಯ ಮೇಲೆ ಚರಂಡಿ ನೀರು ಸಂಗ್ರಹವಾಗಿ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿದೆ’ ಎಂದು ಗ್ರಾಮದ ನಿವಾಸಿ ಸಾಹೇಬಗೌಡ ನಾಯಕ ಅರೋಪಿಸಿದ್ದಾರೆ.

ಗ್ರಾಮದಿಂದ ನಾಗಲಾಪುರಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಗ್ರಾಮಸ್ಥರು ಹಾಗೂ ರೈತರು‌ ಸಂಚರಿಸುತ್ತಾರೆ. ಈ ರಸ್ತೆ ಪಕ್ಕದಲ್ಲಿ ಕುಡಿಯುವ ನೀರು ಸರಬರಾಜಿನ ‍ಪೈಪ್‌ ಒಡೆದಿದೆ. ಚರಂಡಿ ನೀರು ಕುಡಿಯುವ ನೀರು ಸೇರುತ್ತಿದೆ. ಇದೇ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿದರು. 

ಸಮಸ್ಯೆ ಕುರಿತು ಸೋಮನಮರಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ತಕ್ಷಣ ರಸ್ತೆ ದುರಸ್ತಿ ಹಾಗೂ ಕುಡಿಯುವ ನೀರಿನ ಸ್ವಚ್ಛತೆ ಕುರಿತು ಗಮನ ಹರಿಸಬೇಕು. ಇಲ್ಲವಾದರೆ ಗ್ರಾ.ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.