ADVERTISEMENT

ಬಂಡೆ ಉರುಳಿ ಸಾವು ಪ್ರಕರಣ: ಕುಟುಂಬಕ್ಕೆ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 15:27 IST
Last Updated 23 ಅಕ್ಟೋಬರ್ 2024, 15:27 IST
ಇತ್ತೀಚೆಗೆ ಬಂಡೆಗಲ್ಲು ಉರುಳಿ ಮೃತಪಟ್ಟ ಗೌಡೂರು ತಾಂಡಾದ ಬಾಲಕರ ಕುಟುಂಬ ಸದಸ್ಯರಿಗೆ ಜಿಲ್ಲಾಧಿಕಾರಿ ನಿಧಿಯಿಂದ ನೀಡಿದ ₹5 ಲಕ್ಷ ಪರಿಹಾರದ ಚೆಕ್‌ ಅನ್ನು ಶಾಸಕ ಮಾನಪ್ಪ ವಜ್ಜಲ ವಿತರಿಸಿದರು
ಇತ್ತೀಚೆಗೆ ಬಂಡೆಗಲ್ಲು ಉರುಳಿ ಮೃತಪಟ್ಟ ಗೌಡೂರು ತಾಂಡಾದ ಬಾಲಕರ ಕುಟುಂಬ ಸದಸ್ಯರಿಗೆ ಜಿಲ್ಲಾಧಿಕಾರಿ ನಿಧಿಯಿಂದ ನೀಡಿದ ₹5 ಲಕ್ಷ ಪರಿಹಾರದ ಚೆಕ್‌ ಅನ್ನು ಶಾಸಕ ಮಾನಪ್ಪ ವಜ್ಜಲ ವಿತರಿಸಿದರು   

ಹಟ್ಟಿ ಚಿನ್ನದ ಗಣಿ: ಇತ್ತೀಚೆಗೆ ಬಂಡೆಗಲ್ಲು ಉರುಳಿ ಮೂವರು ಮೃತರಾದ ಗೌಡೂರು ತಾಂಡಾದ ಮಕ್ಕಳು ಮನೆಗಳಿಗೆ ಶಾಸಕ ಮಾನಪ್ಪ ವಜ್ಜಲ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಜಿಲ್ಲಾಧಿಕಾರಿ ನಿಧಿಯಿಂದ ಬಿಡುಗಡೆಯಾದ ಮೃತರ ಬಾಲಕರ ಪ್ರತಿ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರದ ಚೆಕ್‌ ಅನ್ನು ವಿತರಿಸಿದರು.

ಈ ವೇಳೆ ತಹಶೀಲ್ದಾರ್‌ ಶಂಶಾಲಂ, ಮುಖಂಡರಾದ ಅಯ್ಯಪ್ಪ ಮಾಳೂರು, ಮುದುಕಪ್ಪ ನಾಯಕ, ಶಂಕರಗೌಡ ಬಳಗಾನೂರು, ಎನ್.ಸ್ವಾಮಿ, ಶಿವಪ್ರಸಾದ ನಾಯಕ, ರಾಘವೇಂದ್ರ ಸ್ವಾಮಿ, ರಮೇಶ ಉಳಿಮೇಶ್ವರ, ಗ್ರಾಮಸ್ಧರು, ತಾಂಡಾ ಜನ ಉಪಸ್ಧಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.