ADVERTISEMENT

ಉಡುಪಿ: ಮೇ 14ರಂದು ಸಹಬಾಳ್ವೆ ಸಮಾವೇಶ

​ಪ್ರಜಾವಾಣಿ ವಾರ್ತೆ
Published 12 ಮೇ 2022, 12:54 IST
Last Updated 12 ಮೇ 2022, 12:54 IST
ಮಾನ್ವಿಯಲ್ಲಿ ಗುರುವಾರ ಉಡುಪಿಯಲ್ಲಿ ನಡೆಯುವ ರಾಜ್ಯ ಮಟ್ಟದ ಸಹಬಾಳ್ವೆ ಸಮಾವೇಶದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು
ಮಾನ್ವಿಯಲ್ಲಿ ಗುರುವಾರ ಉಡುಪಿಯಲ್ಲಿ ನಡೆಯುವ ರಾಜ್ಯ ಮಟ್ಟದ ಸಹಬಾಳ್ವೆ ಸಮಾವೇಶದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು   

ಮಾನ್ವಿ: ‘ಮೇ 14ರಂದು ಉಡುಪಿಯಲ್ಲಿ ಧರ್ಮಗಳ ಮಧ್ಯೆ ಪರಸ್ಪರ ಸೌಹಾರ್ಧತೆ ಬೆಳೆಸುವ ಉದ್ದೇದಿಂದ ರಾಜ್ಯ ಮಟ್ಟದ ಸಹಬಾಳ್ವೆ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ಜನಶಕ್ತಿಯ ಜಿಲ್ಲಾ ಸಂಚಾಲಕ ಮಾರೆಪ್ಪ ಹರವಿ ಹೇಳಿದರು.

ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ದಿನಗಳಲ್ಲಿ ಕೋಮು ಗಲಭೆಗಳು ಹೆಚ್ಚುತ್ತಿವೆ. ಹಿಂದೂ, ಕ್ರೈಸ್ತ ಮುಸ್ಲಿಮರಲ್ಲಿ ಪರಸ್ಪರ ದ್ವೇಷ ಭಾವನೆಗಳನ್ನು ಬಿತ್ತಲಾಗುತ್ತಿದೆ. ಆದ್ದರಿಂದ ‘ಸಾಮರಸ್ಯ ನಡಿಗೆ ಸಹಬಾಳ್ವೆಯ ಕಡೆಗೆ, ದ್ವೇಷ ಕಳೆಯೋಣ ಕೂಡಿ ಬಾಳೋಣ’ ಎನ್ನುವ ಚಿಂತನೆಯೊಂದಿಗೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೌಹಾರ್ದ, ಸಹಬಾಳ್ವೆಯ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಕಾರ್ಯಕ್ರಮಕ್ಕೆ ಮಾನವ ಹಕ್ಕು ಹೋರಾಟಗಾರ ಯೋಗೇಂದ್ರ ಯಾದವ್, ಮಹಿಳಾ ಹೋರಾಟಗಾರ್ತಿ ಕೆ.ನೀಲಾ, ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್, ಡಾ.ಮಹ್ಮದ್ ಸೈಯದ್, ನಜ್ಮಾ ನಜೀರ್ ಚಿಕ್ಕನೇರಳೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಗಣ್ಯರು ಭಾಗವಹಿಸುವರು’ ಎಂದರು.

ADVERTISEMENT

ಮುಖಂಡರಾದ ರವೀಂದ್ರ ಜಾನೇಕಲ್, ಲಕ್ಷ್ಮಣ ಜಾನೇಕಲ್, ಜಿಶಾನ್ ಅಖಿಲ್, ಅಶೋಕ ನಿಲೋಗಲ್, ಯಲ್ಲಪ್ಪ ಹಿರೆಬಾದರದಿನ್ನಿ, ಹನುಮಂತ ಕೋಟೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.