ADVERTISEMENT

ಹಟ್ಟಿಚಿನ್ನದಗಣಿ: ಗಂಧದ ಮರ ಕಳವು

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 5:03 IST
Last Updated 7 ಜುಲೈ 2022, 5:03 IST
ಹಟ್ಟಿ ಪಟ್ಟಣದ ಕಾರ್ಮಿಕರ ಕಾಲೊನಿಯಲ್ಲಿ ಕಳ್ಳರು ಗಂಧದ ಮರ ಕತ್ತರಿಸಿಕೊಂಡು ಹೋಗಿರುವುದು
ಹಟ್ಟಿ ಪಟ್ಟಣದ ಕಾರ್ಮಿಕರ ಕಾಲೊನಿಯಲ್ಲಿ ಕಳ್ಳರು ಗಂಧದ ಮರ ಕತ್ತರಿಸಿಕೊಂಡು ಹೋಗಿರುವುದು   

ಹಟ್ಟಿಚಿನ್ನದಗಣಿ: ಅಧಿಸೂಚಿತ ಪ್ರದೇಶದಲ್ಲಿನ ಗಣಿ ಕಂಪನಿಯ ಕಾರ್ಮಿಕರ ಕಾಲೊನಿಯಲ್ಲಿ ಮನೆಯೊಂದರ ಹಿಂದೆ ಬೆಳೆದಿದ್ದ ಶ್ರೀಗಂಧದ ಮರವನ್ನು ಕಳ್ಳರು ಕತ್ತರಿಸಿಕೊಂಡು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳ್ಳರು ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಂತ್ರಗಳನ್ನು ಬಳಸಿ ಶ್ರೀಗಂಧದ ಮರ ಕತ್ತರಿಸಿ ಕದ್ದೊಯ್ದಿದ್ದಾರೆ. ಈ ಘಟನೆ ಭಾನುವಾರ ರಾತ್ರಿಯೇ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಮಂಗಳವಾರ ಬೆಳಕಿಗೆ ಬಂದಿದೆ.

ಗಣಿ ಕಂಪನಿ ಅಧಿಸೂಚಿತ ಪ್ರದೇಶ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಹೊಲ ಹಾಗೂ ಕಾಲೊನಿಗಳಲ್ಲಿ ಯಥೇಚ್ಛವಾಗಿ ಶ್ರೀಗಂಧದ ಮರಗಳನ್ನು ಬೆಳೆಸಲಾಗಿದೆ. ಬೆಲೆ ಬಾಳುವ ಗಂಧದ ಮರಗಳನ್ನು ಕತ್ತರಿಸಿಕೊಂಡು ಹೋಗುವ ಜಾಲ ಪಟ್ಟಣದಲ್ಲಿ ಬೀಡು ಬಿಟ್ಟಿರುವ ಶಂಕೆ ಇದೆ. ಆದರೂ ಕಳ್ಳರ ಪತ್ತೆಗೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ADVERTISEMENT

ತಾಲ್ಲೂಕು ಅರಣ್ಯಧಿಕಾರಿ ಬಸವರಾಜ ಕಟ್ಟಿಮನಿ,‘ಹಟ್ಟಿಚಿನ್ನದಗಣಿ ಕಂಪನಿ ಶ್ರೀಗಂಧದ ಮರಗಳಿರುವ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.