ADVERTISEMENT

ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿಸಿ: ಜಯಣ್ಣ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 12:49 IST
Last Updated 30 ನವೆಂಬರ್ 2019, 12:49 IST
ರಾಯಚೂರಿನ ಮಕ್ಕಾ ದರ್ವಾಜ ಕೋಟೆಯಲ್ಲಿ ಶನಿವಾರ ಶ್ರಮದಾನ ನಡೆಸಲಾಯಿತು
ರಾಯಚೂರಿನ ಮಕ್ಕಾ ದರ್ವಾಜ ಕೋಟೆಯಲ್ಲಿ ಶನಿವಾರ ಶ್ರಮದಾನ ನಡೆಸಲಾಯಿತು   

ರಾಯಚೂರು: ಇಂದಿನ ದಿನಗಳಲ್ಲಿ ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿಸುವ ಹೊಣೆ ಯುವಕರದ್ದಾಗಿದೆ ಎಂದು ನಗರಸಭೆ ಸದಸ್ಯ ಜಯಣ್ಣ ಹೇಳಿದರು.

ನಗರದ ಮಕ್ಕಾ ದರ್ವಾಜ ಕೋಟೆಯಲ್ಲಿ ನಗರಸಭೆ, ರಾಷ್ಟ್ರೀಯ ಸೇವಾ ಯೋಜನೆ ಜಿಲ್ಲಾ ಘಟಕ ಹಾಗೂ ರಾಯಚೂರು ಐತಿಹಾಸಿಕ ಕೋಟಿಗಳ ಅಧ್ಯಯನ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ’ಶ್ರಮದಾನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಶ್ರಮದಾನದ ಜೊತೆಗೆ ರಾಯಚೂರಿನ ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಐತಿಹಾಸಿಕ ಸ್ಮಾರಕಗಳ ರಕ್ಷಣೆ ಮತ್ತು ಶುಚಿತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು.

ADVERTISEMENT

ನಗರಸಭೆಯ ಸಿಬ್ಬಂದಿ ಅಮರೇಶ ಬಿ, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಅಧಿಕಾರಿ ವೆಂಕಟೇಶರೆಡ್ಡಿ, ಕೋಟಿ ಅಧ್ಯಯನ ಸಮಿತಿಯ ವಿರಹನುಮಾನ್, ಎಚ್.ಎಸ್‌.ಮ್ಯಾದರ, ಸೈಯದ್ ಹಫೀಜುಲ್ಲಾ, ಪ್ರಾಚ್ಯವಸ್ತು ಇಲಾಖೆಯ ಕಿರಣ್, ಬಯಲು ಗ್ರಂಥಾಲಯದ ಸಹಾಯಕ ಶ್ರೀನಿವಾಸ, ಶರಣಪ್ಪ ಪಟ್ಟೇದ್, ನಗರದ ಸರಕಾರಿ ಬಾಲಕರ ಪದವಿಪೂರ್ವ ಕಾಲೇಜು, ಜವಾರ ನಗರ ಪದವಿಪೂರ್ವ ಕಾಲೇಜು, ಮುನ್ನೂರವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು , ಎಸ್.ಆರ್.ಪಿ.ಎಸ್ ಪಿಯು ಕಾಲೇಜು ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.