ADVERTISEMENT

ರಾಷ್ಟ್ರೀಯ ವಿಜ್ಞಾನ ಪ್ರದರ್ಶನಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 12:29 IST
Last Updated 25 ಜನವರಿ 2019, 12:29 IST

ರಾಯಚೂರು: ನಗರದ ನವೋದಯ ಕೇಂದ್ರೀಯ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿಗಳಾದ ಮೋಕ್ಷಿತ್‌ ಚಿಲುಕುರಿ ಮತ್ತು ದಿನೇಶ ದಂಡಮುಡಿ ಅವರು ಸಿದ್ಧಪಡಿಸಿದ್ದ ‘ದ್ವನಿ ನಿಯಂತ್ರಿತ ಕಾರು’ ಮಾದರಿಯು ವಲಯಮಟ್ಟದ ಪ್ರದರ್ಶನದಲ್ಲಿ ಸ್ಥಾನ ಪಡೆದು ರಾಷ್ಟ್ರೀಯ ವಿಜ್ಞಾನ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ನವದೆಹಲಿಯ ನೊಯ್ಡಾದಲ್ಲಿರುವ ಮಯೂರ ಸ್ಕೂಲ್‌ನಲ್ಲಿ ಫೆಬ್ರುವರಿ 8 ಮತ್ತು 9 ರಂದು ರಾಷ್ಟ್ರೀಯ ವಿಜ್ಞಾನ ಪ್ರದರ್ಶನ ನಡೆಯಲಿದೆ. ವಲಯಮಟ್ಟದ ವಿಜ್ಞಾನ ಪ್ರದರ್ಶನವು ಬೆಂಗಳೂರಿನ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಜ. 23 ಮತ್ತು 24 ರಂದು ನಡೆಯಿತು. ಈ ಪ್ರದರ್ಶನದಲ್ಲಿ ರಾಯಚೂರಿನ ನವೋದಯ ಕೇಂದ್ರೀಯ ವಿದ್ಯಾಲಯದಿಂದ 9ನೇ ತರಗತಿಯ ವಿದ್ಯಾರ್ಥಿಗಳಾದ ಗೌತಮ ನರೋಜು ಮತ್ತು ನೀರಜ ರೆಡ್ಡಿ ಅವರು ಸಿದ್ಧಪಡಿಸಿದ್ದ ‘ಸ್ಮಾರ್ಟ್‌ ಗ್ಲೋವ್‌’ ಮಾದರಿ ಸೇರಿದಂತೆ ಎರಡು ತಂಡಗಳು ಭಾಗವಹಿಸಿದ್ದವು. ಒಂದು ತಂಡದ ಮಾದರಿಯು ರಾಷ್ಟ್ರೀಯ ವಿಜ್ಞಾನ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ವಿದ್ಯಾರ್ಥಿಗಳ ಸಾಧನೆಯನ್ನು ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್‌.ಆರ್‌. ರೆಡ್ಡಿ ಅವರು ಅಭಿನಂದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.