ADVERTISEMENT

ಸ್ವಾವಲಂಬಿ ಜೀವನ ನಡೆಸಲು ಕರೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 14:41 IST
Last Updated 4 ಜನವರಿ 2019, 14:41 IST
ರಾಯಚೂರಿನಲ್ಲಿ ಗುರುವಾರ ನಡೆದ ಮೂರು ತಿಂಗಳ ವೃತ್ತಿ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಜಿ.ಎಸ್. ಹಿರೇಮಠ ಮಾತನಾಡಿದರು
ರಾಯಚೂರಿನಲ್ಲಿ ಗುರುವಾರ ನಡೆದ ಮೂರು ತಿಂಗಳ ವೃತ್ತಿ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಜಿ.ಎಸ್. ಹಿರೇಮಠ ಮಾತನಾಡಿದರು   

ರಾಯಚೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ತರಬೇತಿಯನ್ನು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಜಿ.ಎಸ್. ಹಿರೇಮಠ ಕರೆ ನೀಡಿದರು.

ಭಾರತ ಸರ್ಕಾರ ನೆಹರು ಯುವ ಕೇಂದ್ರ, ಭಾರತ ಸೇವಾದಳ ಹಾಗೂ ತೃಪ್ತಿ ಮಹಿಳಾ ಸಂಘವು ಆಯೋಜಿಸಿದ್ದ ಮೂರು ತಿಂಗಳ ವೃತ್ತಿ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.

ತೃಪ್ತಿ ಮಹಿಳಾ ಸಂಘದ ಮುಖ್ಯ ಅತಿಥಿ ಪರಿಮಳಾ ತರಬೇತಿದಾರ ಮಾತನಾಡಿ, ಮಹಿಳೆಯರು ಮೂರು ತಿಂಗಳ ವೃತ್ತಿ ಹೊಲಿಗೆ ತರಬೇತಿಯನ್ನು ಒಳ್ಳೆಯ ರೀತಿಯಲ್ಲಿ ಕಲಿತುಕೊಂಡು ತಮ್ಮ ಸ್ವಂತ ಜೀವನವನ್ನು ನಡೆಸಿಕೊಳ್ಳಲು ಕರೆ ನೀಡಿದರು.

ADVERTISEMENT

ತೃಪ್ತಿ ಮಹಿಳಾ ಸಂಘದ ಅಧ್ಯಕ್ಷೆ ಮುನ್ನಿಬೇಗಂ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಪ್ರಗತಿಗಾಗಿ ಭ್ರಷ್ಟಾಚಾರ ನಿರ್ಮೂಲನೆ ಅತಿ ಅವಶ್ಯವಾಗಿದೆ ಎಂದು ಹೇಳಿದರು.

ಶ್ರೀಜಾ ವಿದ್ಯಾರ್ಥಿ ನಿರೂಪಿಸಿ, ಸ್ವಾಗತಿಸಿದರು. ನೆಹರು ಯುವ ಕೇಂದ್ರದ ರಾಷ್ಟ್ರೀಯ ಸ್ವಯಂ ಸೇವಾಕಾರ್ಯಕರ್ತ ತಿರುಮಲೇಶ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.