ADVERTISEMENT

ಮಸ್ಕಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಶರಭಯ್ಯಸ್ವಾಮಿ ಗಣಚಾರಿ ಆಯ್ಕೆ

ಮಸ್ಕಿ: ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿಯಿಂದ ಲಾಂಛನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 11:33 IST
Last Updated 6 ಫೆಬ್ರುವರಿ 2021, 11:33 IST
ಶರಭಯ್ಯ ಗಣಚಾರಿ
ಶರಭಯ್ಯ ಗಣಚಾರಿ   

ಮಸ್ಕಿ: ‘ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಳಗಾನೂರು ಗ್ರಾಮದ ಶರಭಯ್ಯಸ್ವಾಮಿ ಗಣಚಾರಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಘನಮಠದಯ್ಯ ಸಾಲಿಮಠ ತಿಳಿಸಿದರು.

ಪಟ್ಟಣದ ಗಚ್ಚಿನಮಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಪರಿಷತ್ತಿನ ತಾಲ್ಲೂಕು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಲವು ಹಿರಿಯ ಸಾಹಿತಿಗಳ ಹೆಸರುಗಳನ್ನು ಪ್ರಸ್ತಾಪಿಸಲಾಯಿತು. ಅಂತಿಮವಾಗಿ ಶರಭಯ್ಯ ಗಣಚಾರಿ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು’ ಎಂದು ಹೇಳಿದರು.

‘ಸಮ್ಮೇಳನ ಒಂದು ದಿನ ನಡೆಯಲಿದೆ. ಅಧ್ಯಕ್ಷರ ಮೆರವಣಿಗೆ, ಉದ್ಘಾಟನೆ, ಕವಿಗೋಷ್ಠಿ ಸೇರಿ ಮೂರು ಗೋಷ್ಠಿಗಳು ಹಾಗೂ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ’ ಎಂದು ತಿಳಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ಸಮ್ಮೇಳನದ ಲಾಂಛನವನ್ನು ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಬಿಡುಗಡೆ ಮಾಡಿದರು.

ಸಾಹಿತಿ ಮಹಾಂತೇಶ ಮಸ್ಕಿ, ಗುಂಡುರಾವ ದೇಸಾಯಿ. ಸುಗೂರಯ್ಯ ಹಿರೇಮಠ, ರಂಗಯ್ಯಶೆಟ್ಟಿ, ಅಮರೇಶ ಬ್ಯಾಳಿ, ಹನುಮಂತ ನಾಯಕ, ಮಲ್ಲಿಕಾರ್ಜುನ ಹಾಗೂ ಶ್ರೀಧರ ಬಳೊಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.