ಸಿರವಾರ: ತಾಲ್ಲೂಕಿನ ಚಿಂಚರಕಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ 5 ಅಂಗಡಿಗಳ ಬಾಗಲು ಬೀಗ ಮುರಿದು ಕಳವು ಮಾಡಲಾಗಿದೆ.
ಚಿಂಚಿರಕಿ ಗ್ರಾಮದ ಮೊಬೈಲ್ ಅಂಗಡಿಯಲ್ಲಿ ₹13 ಸಾವಿರ ನಗದು ₹15 ಸಾವಿರ ಮೌಲ್ಯದ ಮೊಬೈಲ್, ಎಲೆಕ್ಟ್ರಿಕಲ್ ಅಂಗಡಿಯಲ್ಲಿ ₹9 ಸಾವಿರ ನಗದು, ಇನ್ನೊಂದು ಮೊಬೈಲ್ ಅಂಗಡಿಯಲ್ಲಿ ₹2 ಸಾವಿರ ನಗದು ಮತ್ತು ₹15 ಸಾವಿರ ಮೌಲ್ಯದ ಎರಡು ಮೊಬೈಲ್, ಅಕ್ಕಿ ಅಂಗಡಿಯಲ್ಲಿ ₹5 ಸಾವಿರ ನಗದು ದೋಚಿದ್ದಾರೆ. ಆಟೊ ಗ್ಯಾರೇಜ್ ಮತ್ತು ಆಟೊಮೊಬೈಲ್ ಅಂಗಡಿಗಳ ಬೀಗ ಮುರಿದು ಯಾವುದೇ ನಗದು ಇಲ್ಲದೇ ಬರಿಗೈಲಿ ಹೋಗಿದ್ದಾರೆ ಎಂದು ಅಂಗಡಿಗಳ ಮಾಲೀಕರು ತಿಳಿಸಿದ್ದಾರೆ.
ಈ ಕುರಿತು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.