
ಸಿಂಧನೂರು: ವಾಕ್ ಫ್ರೀಡಂ ಅಭಿಯಾನದ ಅಂಗವಾಗಿ ನಗರದ ಅನಿಕೇತನ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಮೂವ್‌ಮೆಂಟ್ ಗ್ಲೋಬಲ್ ಫೌಂಡೇಶನ್, ರಾಯಚೂರಿನ ಸಾಧನ ಸಂಸ್ಥೆ, ಮದನಪಲ್ಲಿಯ ಗ್ರಾಮ ಜ್ಯೋತಿ ಸೊಸೈಟಿ ವತಿಯಿಂದ ಮಾನವ ಕಳ್ಳಸಾಗಾಣಿಕೆ ವಿರುದ್ಧ ಶನಿವಾರ ಮೌನ ಮೆರವಣಿಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿ ವೀಣಾ ಮಾಡಶಿರವಾರ ಮಾತನಾಡಿ,‘ಬಾಲಕಿಯರು ಮತ್ತು ಮಹಿಳೆಯರು ಮೊಬೈಲ್ ಹಾವಳಿಯಿಂದ ಹೊರಬಂದು ಬದುಕು ಕಟ್ಟಿಕೊಳ್ಳಬೇಕು. ಮಾನವ ಕಳ್ಳಸಾಗಾಣಿಕೆ ವಿರುದ್ಧ ಹೋರಾಟ ಮಾಡಬೇಕು. ಸ್ವ-ರಕ್ಷಣೆಗಾಗಿ ತಾವೇ ಧೈರ್ಯದಿಂದ ಮುನ್ನುಗ್ಗಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗಂಗಾಧರ ವೀರಗಂಟೆ, ಸಾಧನ ಸಂಸ್ಥೆಯ ಕಾರ್ಯದರ್ಶಿ ಶರಣಪ್ಪ ಬರಸಿ, ಉಪನ್ಯಾಸಕಿ ರೇಷ್ಮಾ ಮಾತನಾಡಿದರು.
ಮೌನ ಮೆರವಣಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, 20 ಸ್ವಯಂ ಸೇವಕರಿಗೆ ಹಾಗೂ ಸಹಭಾಗಿ ಸಂಸ್ಥೆಗಳಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.