ADVERTISEMENT

ಸಿಂಧನೂರಿನ ಗಾಂಧಿನಗರ ಭವಿಷ್ಯದ ಪುಣ್ಯಕ್ಷೇತ್ರವಾಗಲಿದೆ: ಎಚ್.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 9 ಮೇ 2022, 2:34 IST
Last Updated 9 ಮೇ 2022, 2:34 IST
ಎಚ್‌.ಡಿ ದೇವೇಗೌಡ
ಎಚ್‌.ಡಿ ದೇವೇಗೌಡ    

ಸಿಂಧನೂರು: ತಾಲ್ಲೂಕಿನ ಗಾಂಧಿನಗರದಲ್ಲಿ ಪ್ರತಿಷ್ಠಾಪನೆಯಾದ ಲಕ್ಷ ನರ್ಮದಾ ಲಿಂಗಸಹಿತ ಸ್ಪಟಿಕ ಆತ್ಮಲಿಂಗ ದೇಶದಲ್ಲಿ ಪ್ರಥಮವಾಗಿದ್ದು, ಮುಂದಿನ ದಿನ ದೇಶದ ಪುಣ್ಯ ಕ್ಷೇತ್ರ ಆಗಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ತಾಲ್ಲೂಕಿನ ಗಾಂಧಿನಗರ ಗ್ರಾಮದಲ್ಲಿ ಭಾನುವಾರ ನಡೆದ ಲಕ್ಷ ನರ್ಮದಾ ಲಿಂಗಸಹಿತ ಆತ್ಮಲಿಂಗ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

ದೇಶವನ್ನೆಲ್ಲ ಸುತ್ತಿ ಸಾವಿರಾರು ಈಶ್ವರ ಮೂರ್ತಿ, ಶಿವಲಿಂಗ ನೋಡಿದ್ದೇನೆ. ಆದರೆ, ಈಶ್ವರನ ಪರಿವಾರ ಸಮೇತ ದೇವತೆಗಳೊಂದಿಗೆ ಆತ್ಮಲಿಂಗವನ್ನು ಎಲ್ಲಿಯೂ ಕಂಡಿಲ್ಲ. ಇದೊಂದು ವಿಶಿಷ್ಟ ಶಕ್ತಿಯುಳ್ಳ ಶ್ರದ್ದಾಭಕ್ತಿಯ ಕ್ಷೇತ್ರವಾಗಿ ಭಕ್ತರ ಇಷ್ಟಾರ್ಥ ಈಡೇರಿಸಲಿ ಎಂದರು.

ADVERTISEMENT

ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ಗಾಂಧಿನಗರದಲ್ಲಿ ಸ್ಪಟಿಕಲಿಂಗ ಸ್ಥಾಪಿಸಿದ್ದು ಹೆಮ್ಮೆಯ ಸಂಗತಿ. ಸ್ಥಳೀಯರ ಹಾಗೂ ದಿವಂಗತ ಎಂ.ಗಂಗಾಧರ್‍ರಾವ್ ಅವರ ಕೊಡುಗೆ ಅಪಾರವಾಗಿದೆ. ಈ ಆತ್ಮಲಿಂಗದ ಕೃಪೆ ಯಿಂದ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ಸಮೃದ್ಧಿಯಾಗಲಿ ಎಂದರು.

ಮಾನ್ವಿ ಶಾಸಕ ರಾಜಾವೆಂಕಟಪ್ಪ ನಾಯಕ, ವಳಬಳ್ಳಾರಿಯ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು.

ದೇವಸ್ಥಾನ ಸಮಿತಿಯ ಎಂ.ಭಾಸ್ಕರ್‍ರಾವ್, ಗಾಂಧಿನಗರ ಗ್ರಾ.ಪಂ ಅಧ್ಯಕ್ಷ ದುರುಗಪ್ಪ ನಾಯಕ, ಸದಸ್ಯರಾದ ದೊರೆಬಾಬು, ಗೋಪಿನೀಡಿ ಕೃಷ್ಣ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ತಹಶೀಲ್ದಾರ್ ಮಂಜುನಾಥ ಭೋಗಾವತಿ, ಮುಖಂಡ ರಾದ ಕರಿಯಮ್ಮ ನಾಯಕ, ಸಿದ್ದು ಬಂಡಿ, ರಂಗಾನಾಥ ವಕೀಲ ಇದ್ದರು.

ಲಕ್ಷ ನರ್ಮದಾ ಲಿಂಗಸಹಿತ ಆತ್ಮಲಿಂಗ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಸೇರಿ ಹಲವು ಗಣ್ಯರು ಭಾಗವಹಿಸಿ, ಸ್ಪಟಿಕ ಶಿವಲಿಂಗದ ದರ್ಶನ ಪಡೆದರು.

ಸಿಂಧನೂರು ತಾಲ್ಲೂಕಿನ ಗಾಂಧಿನಗರ ಗ್ರಾಮದಲ್ಲಿ ಭಾನುವಾರ ನಡೆದ ಲಕ್ಷ ನರ್ಮದಾ ಲಿಂಗಸಹಿತ ಆತ್ಮಲಿಂಗ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿದರು

‘ಶಾಂತಿ ಸ್ಥಾಪಿಸಿ’

ಸಿಂಧನೂರು: ‘ಜಾತಿ-ಧರ್ಮ ಗಳ ಮಧ್ಯೆ ಸಾಮರಸ್ಯ ಹಾಳುಗೆ ಡವಲು ದುಷ್ಟಶಕ್ತಿಗಳು ಯತ್ನಿಸು ತ್ತಿವೆ. ದೇಶದಲ್ಲಿ ಅಶಾಂತಿಗೆ ಆಸ್ಪದ ನೀಡದೇ ಪ್ರಧಾನಿ ನರೇಂದ್ರ ಮೋದಿ ಶಾಂತಿ ಸ್ಥಾಪ ನೆಗೆ ಯತ್ನಿಸಬೇಕು’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

‘ಕಾಂಗ್ರೆಸ್ ಮತ್ತು ಬಿಜೆಪಿ ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿವೆ. ಅಧಿಕಾರಕ್ಕಾಗಿ ಜನರ ನಡುವೆ ಹೊಸ ಸಮಸ್ಯೆ ಗಳನ್ನು ತಂದಿಟ್ಟು ಕಲಹಕ್ಕೆ ಎಡೆಮಾಡಿಕೊಡುತ್ತಿವೆ’ ಎಂದು ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

‘ಮಂದಿರದಲ್ಲಿ ಸುಪ್ರಭಾತ, ಮಸೀದಿಯಲ್ಲಿ ಅಜಾನ್ ಮುಂದಿ ಟ್ಟುಕೊಂಡು ಐಕ್ಯತೆ ಮುರಿಯಲು ಕೆಲ ಮತಾಂಧಶಕ್ತಿಗಳು ಪ್ರಯತ್ನಿಸುತ್ತಿರುವುದು ವಿಷಾದನೀಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.