ಸಿಂಧನೂರು: ಕೇಂದ್ರದ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅ. 16ರಂದು ತಾಲ್ಲೂಕಿನ ಜವಳಗೇರಾಕ್ಕೆ ಬೇಟಿ ನೀಡಲಿದ್ದು, ಸಿದ್ಧತೆ ಭರದಿಂದ ಸಾಗಿದೆ.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ರೈತರ ಬೆಳೆಯ ಮೌಲ್ಯವರ್ಧನೆ ಉದ್ದೇಶದಿಂದ ತಲಾ ಒಂದು ರೈತ ಉತ್ಪಾದಕರ ಕಂಪನಿಯನ್ನು ನಬಾರ್ಡ್‍ದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಜವಳಗೇರಿಯ ಸ್ವಾಸ್ಥ್ಯ ರೈತ ಉತ್ಪಾದಕ ಕಂಪನಿಯನ್ನು ರಾಯಚೂರು ಜಿಲ್ಲೆಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಕೃಷಿ ಸಂಸ್ಕರಣೆ, ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಉದ್ಘಾಟಿಸಲು ನಿರ್ಮಲಾ ಸೀತಾರಾಮನ್ ಆಗಮಿಸಲಿದ್ದಾರೆ ಎಂದು ರೈತರ ಉತ್ಪಾದಕ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ನಾಡಗೌಡ ತಿಳಿಸಿದ್ದಾರೆ.
‘ತೊಗರಿ ಮತ್ತು ಕಡಲೆ ಸಂಸ್ಕರಿಸಿ ಬೇಳೆ ಮಾಡಿ, ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಅವುಗಳಿಗೆ ನಬಾರ್ಡ್ ಮತ್ತು ರಾಜ್ಯಸಭೆ ಸದಸ್ಯರ ಅನುದಾನದಲ್ಲಿ ₹ 2.5 ಕೋಟಿ ಅನುದಾನ ನೀಡಲಾಗಿದೆ. ಸ್ವಾಸ್ಥ್ಯ ರೈತ ಉತ್ಪಾದಕರ ಕಂಪನಿಯಿಂದ ತಯಾರಾಗುವ ಉತ್ಪಾದನೆಗೆ ಕಲ್ಯಾಣ ಸಂಪದ ಎಂದು ನಾಮಕರಣ ಮಾಡಲಾಗಿದೆ. ಈ ಮೂಲಕ ವ್ಯವಹಾರ ವಹಿವಾಟು ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಬಸವರಾಜ ನಾಡಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.