ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಸಿಂಧನೂರು (ರಾಯಚೂರು ಜಿಲ್ಲೆ): ನಗರದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಿನಿ ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಿರಿಯ ಸಹಾಯಕ ಮತ್ತು ನಾಲ್ವರು ಗ್ರಾಮ ಆಡಳಿತಾಧಿಕಾರಿಗಳ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮಗಳ ಮದುವೆಗಾಗಿ ಜಮೀನಿನ ಮೇಲೆ ಪಡೆದಿದ್ದ ₹4 ಲಕ್ಷ ಸಾಲದ ಹಣವನ್ನು ವಾಪಸ್ ಕೊಡಲು ಎಪಿಎಂಸಿಯ ಖಾಸಗಿ ಕೋಣೆಗೆ ಹೋದ ಸಂದರ್ಭದಲ್ಲಿ ಐವರು ಸೇರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
‘ನನ್ನ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿದೆ. ಮಿನಿವಿಧಾನಸೌಧ ಕಚೇರಿಯ ಕಿರಿಯ ಸಹಾಯಕ ರಾಜಾಭಕ್ಷಿ, ಗ್ರಾಮ ಆಡಳಿತಾಧಿಕಾರಿ ಗಳಾದ ಮಲ್ಲಿಕಾರ್ಜುನ ಗಡೇದ್, ಬಂದೇನವಾಜ್ ನಿಡಗುಂದಿ, ಮೃತ್ಯುಂಜಯ ಹಾಗೂ ಆನಂದ ಸೇರಿ ಜಮೀನು ಖರೀದಿ ಕರಾರು ಪತ್ರ ಬರೆಸಿಕೊಂಡು ಸಾಲ ಕೊಟ್ಟಿದ್ದರು. ಅವರು ಸರ್ಕಾರಿ ಉದ್ಯೋಗದಲ್ಲಿ ದ್ದರೂ ಕರಾರು ಪತ್ರದಲ್ಲಿ ತಮ್ಮ ಉದ್ಯೋಗ ಒಕ್ಕಲುತನ ಎಂದು ತೋರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.