ADVERTISEMENT

ಸಿರವಾರ ಪಟ್ಟಣ ಪಂಚಾಯಿತಿ ಉಪಚುನಾವಣೆ: ಶೇ 69.69ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 7:12 IST
Last Updated 18 ಆಗಸ್ಟ್ 2025, 7:12 IST
<div class="paragraphs"><p>ಸಿರವಾರ ಪಟ್ಟಣ ಪಂಚಾಯಿತಿಯ 12ನೇ ವಾರ್ಡ್‌ಗೆ ಭಾನುವಾರ ನಡೆದ ಉಪಚುನಾವಣೆ ನಡೆಯಿತು&nbsp;</p></div>

ಸಿರವಾರ ಪಟ್ಟಣ ಪಂಚಾಯಿತಿಯ 12ನೇ ವಾರ್ಡ್‌ಗೆ ಭಾನುವಾರ ನಡೆದ ಉಪಚುನಾವಣೆ ನಡೆಯಿತು 

   

ಸಿರವಾರ: ಪಟ್ಟಣ ಪಂಚಾಯಿತಿಯ 12ನೇ ವಾರ್ಡ್‌ ಸದಸ್ಯೆ ಅಮರಮ್ಮ ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಭಾನುವಾರ ಉಪಚುನಾವಣೆ ನಡೆಯಿತು. ಶೇ69.69ರಷ್ಟು ಮತದಾನವಾಗಿದೆ.

ನೀರಾವರಿ ಇಲಾಖೆಯ ಕಚೇರಿಯ ಮತದಾನ ಕೇಂದ್ರದಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆವರೆಗೆ ಮತದಾನ ನಡೆಯಿತು.

ADVERTISEMENT

ಒಟ್ಟು 759 ಮತದಾರರಲ್ಲಿ 749ರಲ್ಲಿ 521 ಜನ ಮತದಾನ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಜ್ಯೋತಿ ದಾನನಗೌಡ, ಬಿಜೆಪಿಯಿಂದ ಹುಸೇನಬೀ, ಜೆಡಿಎಸ್‌ನಿಂದ ಮಾಳಮ್ಮ ಹನುಮಂತ ಸ್ಪರ್ಧಿಸಿದ್ದರು.

ತಹಶೀಲ್ದಾರ್ ಅಶೋಕ ಪವಾರ್ ನೇತೃತ್ವದಲ್ಲಿ ಚುನಾವಣಾಧಿಕಾರಿಗಳಾಗಿ ದೇವೆಂದ್ರಪ್ಪ, ಶ್ರೀನಿವಾಸ ಬೂತ್ ಅಧಿಕಾರಿಗಳಾಗಿ ಚನ್ನವೀರಯ್ಯಸ್ವಾಮಿ, ಬಲವಂತ ಮಹೇಂದ್ರಕರ್, ಬಸವರಾಜ, ಅಕ್ಷಯ ಕುಮಾರ ಕಾರ್ಯನಿರ್ವಹಿಸಿದರು.

ಸಿಪಿಐ ಎಂ.ಶಶಿಕಾಂತ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.