ADVERTISEMENT

ಸೋಲಾರ ದೀಪ, ವಾಟರ್ ಹಿಟರ್ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 16:02 IST
Last Updated 1 ನವೆಂಬರ್ 2019, 16:02 IST
 ಶಾಸಕ ವೆಂಕಟರಾವ್ ನಾಡಗೌಡ ಅರ್ಹ ಫಲಾನುಭವಿಗಳಿಗೆ ಸೋಲಾರ ದೀಪ ಮತ್ತು ಹಿಟರ್‌ಗಳನ್ನು ವಿತರಿಸಿದರು
 ಶಾಸಕ ವೆಂಕಟರಾವ್ ನಾಡಗೌಡ ಅರ್ಹ ಫಲಾನುಭವಿಗಳಿಗೆ ಸೋಲಾರ ದೀಪ ಮತ್ತು ಹಿಟರ್‌ಗಳನ್ನು ವಿತರಿಸಿದರು   

ಸಿಂಧನೂರು: ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ಫಲಾನುಭವಿಗಳಿಗೆ ಸೋಲಾರ ದೀಪ ಮತ್ತು ಸೋಲಾರ ಹಿಟರ್‌ಗಳನ್ನು ಶುಕ್ರವಾರ ಶಾಸಕ ವೆಂಕಟರಾವ್ ನಾಡಗೌಡ ವಿತರಿಸಿದರು.

ನಂತರ ಮಾತನಾಡಿದ ಅವರು, ಸಿಂಧನೂರು ಕ್ಷೇತ್ರದ ಹಿಂದುಳಿದ ಗ್ರಾಮಗಳ ಜನರು ಕಟ್ಟಿಗೆಯ ಒಲೆಗಳನ್ನು ಬಳಸುತ್ತಿದ್ದಾರೆ. ಪರಿಸರ ಮಾಲಿನ್ಯ ಮತ್ತು ಅರಣ್ಯ ಸಂರಕ್ಷಣೆ ಹಿತದೃಷ್ಠಿಯಿಂದ 2018-19ನೇ ಸಾಲಿನ ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ₹ 3,500 ಬೆಲೆಯ ಸೋಲಾರ ದೀಪ ಮತ್ತು ₹ 16 ಸಾವಿರ ಬೆಲೆಯ ವಾಟರ್ ಹಿಟರ್‌ಗಳನ್ನು 64 ಫಲಾನುಭವಿಗಳಿಗೆ ವಿತರಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಫಲಾನುಭವಿಗಳಾದ ಕಂಠೆಮ್ಮ ಚೆನ್ನಳ್ಳಿ, ಶೇಷು ಲಕ್ಷ್ಮಿಕ್ಯಾಂಪ್, ಗಂಗಮ್ಮ ರೌಡಕುಂದಾ, ಹೊನ್ನಪ್ಪ, ವೀರೇಶ ಸಿಂಗಾಪುರ, ನಿರ್ಮಲಾ ಮಲ್ಕಾಪುರ, ಅಂಬಣ್ಣ ಗೊಬ್ಬರಕಲ್, ರಾಮಣ್ಣ ಹುಡಾ, ನಾಗಮ್ಮ ಮುಕ್ಕುಂದಾ, ಈರಮ್ಮ, ತಿಮ್ಮಾರೆಡ್ಡಿ, ರಮೇಶ, ಕಲ್ಪನಾ, ವಿರುಪಣ್ಣ ಸೇರಿದಂತೆ ಹಿಂದುಳಿದ ಗ್ರಾಮಗಳ ಮತ್ತಿತರ ಜನರಿಗೆ ಸೋಲಾರ ದೀಪ ಮತ್ತು ವಾಟರ್ ಹಿಟರ್‌ಗಳನ್ನು ವಿತರಿಸಲಾಯಿತು.

ADVERTISEMENT

ಮಾನ್ವಿ ವಲಯ ಅರಣ್ಯಾಧಿಕಾರಿ ರಾಜೇಶ, ಸಿಂಧನೂರು ಉಪವಲಯ ಅರಣ್ಯಾಧಿಕಾರಿ ಮಲಕಾಜಮ್ಮ ಹಿರೇಮಠ, ಮುಖಂಡರಾದ ಧರ್ಮನಗೌಡ ಮಲ್ಕಾಪುರ, ಲಿಂಗರಾಜ ಹೂಗಾರ, ಅರ್ಜುನ ನಾಡಗೌಡ, ಲಕ್ಷ್ಮಣರಾವ್, ಮಲ್ಲೇಶ್ವರರಾವ್, ಸೈಯ್ಯದ್ ಆಸೀಫ್, ಶಂಕರಗೌಡ ಎಲೆಕೂಡ್ಲಿಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.