ADVERTISEMENT

ಮುದಗಲ್: ಹಣಕ್ಕಾಗಿ ತಾಯಿಯನ್ನೇ ಕೊಂದ ಮಗ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 9:24 IST
Last Updated 27 ಜನವರಿ 2026, 9:24 IST
<div class="paragraphs"><p>ಚಂದವ್ವ,&nbsp;ಕುಮಾರ ಬೂದೆಪ್ಪ</p></div>

ಚಂದವ್ವ, ಕುಮಾರ ಬೂದೆಪ್ಪ

   

ಮುದಗಲ್: ಸಮೀಪದ ಜಕ್ಕೆರಮಡವು ತಾಂಡಾದಲ್ಲಿ ಹಣಕ್ಕಾಗಿ ತಾಯಿಯನ್ನು ಕೊಲೆ ಮಾಡಿದ್ದಾನೆ.

ಬೆಂಗಳೂರಿನಲ್ಲಿ ಇದ್ದ ಚಂದವ್ವನ ಮಗ ಕುಮಾರ(32) ಜ.26 ರಂದು ತಾಂಡಾಕ್ಕೆ ಆಗಮಿಸಿ, ಹಣ ನೀಡು ಎಂದು ತಾಯಿಗೆ ಪಿಡಿಸುತ್ತಿದ್ದ. ನನ್ನಲ್ಲಿ ಹಣ ಇಲ್ಲ ಎಂದು ಹೇಳಿದಾಗಲೂ ಹೊಲ ಮಾರಿ ಕೊಡುವಂತೆ ಒತ್ತಾಯಿಸಿದ್ದ.

ADVERTISEMENT

ನಿನ್ನ ತಮ್ಮ ಸಂತೋಷನ ಮದುವೆ ಮಾಡಬೇಕಿಗಿದೆ. ಈಗಲೇ ಹೊಲ ಮಾರಿದರೆ ಮುಂದೆ ತೊಂದರೆಯಾಗುತ್ತದೆ ಎಂದು ಸಮಜಾಯಿಸಿದ್ದಳು. ನಾಳೆ ಎನ್ನುವಷ್ಟರಲ್ಲಿ ₹2 ಲಕ್ಷ ಬೇಕು ಎಂದು ಹೇಳಿ ಹೋಗಿ, ಮರುದಿನ ಬಂದು ಹಣ ನೀಡು ಎಂದು ಮತ್ತೆ ಹಟ ಹಿಡಿದಿದ್ದರಿಂದ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ಹೋಗಿ ತಾಯಿಯನ್ನು ಕಲ್ಲಿನಿಂದ ಹೊಡೆದಿದ್ದಾನೆ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಚಂದವ್ವಳನ್ನು ಮುದಗಲ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಪೊಲೀಸರು

ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಘಟನಾ ಸ್ಥಳಕ್ಕೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಭೇಟಿ ನೀಡಿ ಪರಿಶೀಲಿಸಿದರು.

ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಮಸ್ಕಿ ಸಿಪಿಐ ರಾಮಣ್ಣ ಜಾಲಗೇರಿ, ಪಿಎಸ್ಐ ವೆಂಕಟೇಶ ಮಾಡಗೇರಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.