ADVERTISEMENT

ಔಷಧಿ ಸಿಂಪರಣೆ ವಿತರಿಸುವ ಯಂತ್ರ ವಿತರಣೆ 

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 13:55 IST
Last Updated 1 ಏಪ್ರಿಲ್ 2020, 13:55 IST
ರಾಯಚೂರು ಜಿಲ್ಲಾಡಳಿತಕ್ಕೆ ಎನ್.ಎಸ್.ಬೋಸರಾಜು ಫೌಂಡೆಷನ್ ವತಿಯಿಂದ ಫಾಗಿಂಗ್ ಯಂತ್ರವನ್ನು ಮಂಗಳವಾರ ಹಸ್ತಾಂತರಿಸಲಾಯಿತು
ರಾಯಚೂರು ಜಿಲ್ಲಾಡಳಿತಕ್ಕೆ ಎನ್.ಎಸ್.ಬೋಸರಾಜು ಫೌಂಡೆಷನ್ ವತಿಯಿಂದ ಫಾಗಿಂಗ್ ಯಂತ್ರವನ್ನು ಮಂಗಳವಾರ ಹಸ್ತಾಂತರಿಸಲಾಯಿತು   

ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎನ್.ಎಸ್.ಬೋಸರಾಜು ಫೌಂಡೆಷನ್ ವತಿಯಿಂದ ಫಾಗಿಂಗ್ ಯಂತ್ರವನ್ನು ಜಿಲ್ಲಾಡಳಿತಕ್ಕೆ ನೀಡಲಾಯಿತು.

ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಸಾಯನಿಕ ಸಿಂಪರಣೆ ಯಂತ್ರವನ್ನು ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಫಾಗಿಂಗ್ ಯಂತ್ರದ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಬ್ಲಿಚಿಂಗ್ ಮತ್ತು ಸಾನಿಟೈಜರ್ ಸಿಂಪರಣೆ ಮಾಡುವ ಯಂತ್ರವನ್ನು ನಗರದ ವಿವಿಧ ಬಡಾವಣೆಗಳಲ್ಲಿ ಬಳಸಿಕೊಳ್ಳಲು ನಗರಾಭಿವೃದ್ದಿ ಕೋಶದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ, ನಗರಸಭೆ ಸದಸ್ಯರಾದ ಜಯಣ್ಣ, ಎನ್.ಶ್ರೀನಿವಾಸರೆಡ್ಡಿ, ದರೂರು ಬಸವರಾಜ, ಸಾಜೀದ್ ಸಮೀರ್, ಅಫಜಲ್, ಬೂದೆಪ್ಪ, ಅಬ್ದುಲ್ ವಾಹೀದ್, ಹರಿಬಾಬು, ಸಣ್ಣ ನರಸರೆಡ್ಡಿ, ತಿಮ್ಮಪ್ಪ ನಾಯಕ, ಸುನೀಲಕುಮಾರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಅಸ್ಲಂ ಪಾಷ, ಮಹ್ಮದ ಹಾಜಿ, ಮಹ್ಮದ ಶಾಲಂ, ಗುಡ್ಡಿ ತಿಮ್ಮಾರೆಡ್ಡಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.