
ಪ್ರಜಾವಾಣಿ ವಾರ್ತೆ
ರಾಯಚೂರು: ಸುಬುಧೇಂದ್ರ ತೀರ್ಥರ 53ನೇ ವರ್ಧಂತಿ ಮಹೋತ್ಸವದ ಪ್ರಯುಕ್ತ ಮಠದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು.
ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಮಠದ ಸಿಬ್ಬಂದಿ ಸ್ವಾಮೀಜಿಗೆ ತೈಲಾಭ್ಯಂಜನ ಮಾಡಿದರು. ನಂತರ, ಆರತಿ ಮತ್ತು ಇತರ ಪವಿತ್ರ ಆಚರಣೆಗಳನ್ನು ಆಚರಿಸಲಾಯಿತು. ನಂತರ ಮೂಲ ರಾಮದೇವರ ಪೂಜೆ ನೆರವೇರಿಸಿ ಯಾಗಶಾಲೆಯಲ್ಲಿ ನಡೆದ ಮೃತ್ಯುಂಜಯ, ಆಯುಷ್ಯ, ಪವಮಾನ ಹಾಗೂ ಮತ್ತಿತರ ಹೋಮಗಳ ಪೂರ್ಣಾಹುತಿಗೆ ಸ್ವಾಮೀಜಿ ಚಾಲನೆ ನೀಡಿದರು.
ಮಂತ್ರಾಲಯದ ಶ್ರೀಮಠದ ಸಿಬ್ಬಂದಿ, ಭಕ್ತರು ಸ್ವಾಮೀಜಿಯವರಿಗೆ ಪುಷ್ಪ ಮಾಲೆ ಅರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.