ADVERTISEMENT

ರಾಯಚೂರು| 625ಕ್ಕೆ 625 ಅಂಕ ಗಳಿಸಿದರೆ ಒಂದು ತೊಲ ಬಂಗಾರ: ತಹಶೀಲ್ದಾರ್ ವರ್ಮಾ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 7:49 IST
Last Updated 29 ಅಕ್ಟೋಬರ್ 2025, 7:49 IST
   

ರಾಯಚೂರು: ‘ಉಡಮಗಲ್ ಖಾನಾಪುರ ಸರ್ಕಾರಿ ಪ್ರೌಢಶಾಲೆಯ ಯಾವುದೇ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕಗಳನ್ನು ಗಳಿಸಿದರೆ ಆ ವಿದ್ಯಾರ್ಥಿಗೆ ನಾನು ಒಂದು ತೊಲ ಬಂಗಾರ ಕೊಡುವೆ’ ಎಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಹೇಳಿದರು.

ತಾಲ್ಲೂಕಿನ ಉಡಮಗಲ್ ಖಾನಾಪುರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರೇರಣಾದಾಯಕ ಭಾಷಣ ಮಾಡಿದರು.

‘ವಿದ್ಯಾರ್ಥಿಗಳಿಗೆ ವಿವಿಧ ಮಹನೀಯರ ಗಣ್ಯರ ಸಾಧನೆ ಸ್ಫೂರ್ತಿ ನೀಡಬೇಕು. ಪರಿಶ್ರಮದ ಪಟ್ಟು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಪ್ರಯತ್ನಿಸಬೇಕು‘ ಎಂದು ಸಲಹೆ ನೀಡಿದರು.

ADVERTISEMENT

ಸಾಕ್ಷತರಾ ನೋಡಲ್ ಅಧಿಕಾರಿ ದಂಡಪ್ಪ ಬಿರಾದಾರ, ಮುಖ್ಯ ಶಿಕ್ಷಕ ವೀರೇಶ ಅಂಗಡಿ, ಉಪ ತಹಶೀಲ್ದಾರ್ ಮಹಮ್ಮದ್ ಮುಸ್ತಾಕ್ ಅಹಮದ್. ಕಂದಾಯ ನಿರೀಕ್ಷಕ ರಾಘವೇಂದ್ರ. ಗ್ರಾಮ ಲೆಕ್ಕಾಧಿಕಾರಿ ವೀರೇಂದ್ರ ಪಾಟೀಲ, ಶಿಕ್ಷಕರಾದ ಪಾಂಡುರಂಗ ದೇಸಾಯಿ. ನಫೀಜ್ ಅಂಜುಮ್. ವೀಣಾ ಕುಲಕರ್ಣಿ ಸಾವಿತ್ರಿ, ಅನಿತಾ ಎನ್. ಪದ್ಮಾವತಿ ಉಪಸಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.