ADVERTISEMENT

ಸರ್ಕಾರದ ಸಾಧನೆಯ ಮಾಹಿತಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 15:58 IST
Last Updated 12 ಜೂನ್ 2025, 15:58 IST
ರಾಯಚೂರಿನ ಕೇಂದ್ರ ಬಸ್‌ ನಿಲ್ದಾಣದಲ್ಲಿ ಏರ್ಪಡಿಸಿರುವ ರಾಜ್ಯ ಸರ್ಕಾರದ ಸಾಧನೆ ಬಿಂಬಿಸಿರುವ ಪ್ರದರ್ಶನ ಮಳಿಗೆಯಲ್ಲಿ ಸಾಧನೆ ಫಲಕ ವೀಕ್ಷಿಸಿದ ಸಂಸದ ಜಿ.ಕುಮಾರ ನಾಯಕ. ಈ ಸಂದರ್ಭದಲ್ಲಿ ಜಯವಂತರಾವ್ ಪತಂತೆ ಹಾಗೂ ಎಂ.ಎಸ್.ಚಂದ್ರಶೇಖರ ಉಪಸ್ಥಿತರಿದ್ದರು
ರಾಯಚೂರಿನ ಕೇಂದ್ರ ಬಸ್‌ ನಿಲ್ದಾಣದಲ್ಲಿ ಏರ್ಪಡಿಸಿರುವ ರಾಜ್ಯ ಸರ್ಕಾರದ ಸಾಧನೆ ಬಿಂಬಿಸಿರುವ ಪ್ರದರ್ಶನ ಮಳಿಗೆಯಲ್ಲಿ ಸಾಧನೆ ಫಲಕ ವೀಕ್ಷಿಸಿದ ಸಂಸದ ಜಿ.ಕುಮಾರ ನಾಯಕ. ಈ ಸಂದರ್ಭದಲ್ಲಿ ಜಯವಂತರಾವ್ ಪತಂತೆ ಹಾಗೂ ಎಂ.ಎಸ್.ಚಂದ್ರಶೇಖರ ಉಪಸ್ಥಿತರಿದ್ದರು   

ರಾಯಚೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಯಚೂರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಆಯೋಜಿಸಿರುವ ರಾಜ್ಯ ಸರ್ಕಾರದ ಅಭಿವೃದ್ದಿಗಳ ಸಾಧನೆ ಬಿಂಬಿಸುವ ಪ್ರದರ್ಶನ ಮಳಿಗೆಗೆ ಸಂಸದ ಜಿ.ಕುಮಾರ ನಾಯಕ ಚಾಲನೆ ನೀಡಿದರು.

ಕೇಂದ್ರ ಬಸ್ ನಿಲ್ದಾಣದ ಮುಖ್ಯದ್ವಾರದ ಮೂಲಕ ಆಗಮಿಸುವ ವೇಳೆ 'ಗ್ಯಾರಂಟಿ ಸಮರ್ಪಣೆ ಅಭಿವೃದ್ಧಿಯ ಸಂಕಲ್ಪ, ನಾಡಿನ ಏಳು ಕೋಟಿ ಜನರ ಬೆಳಕು ಗ್ಯಾರಂಟಿ ಬದುಕು' ಫಲಕದ ಬಳಿಯಲ್ಲಿ ನಿಂತು ಸೆಲ್ಫಿ ತೆಗೆಸಿಕೊಂಡರು.

ಕರ್ನಾಟಕ ಸರ್ಕಾರದ ಹೆಮ್ಮೆಯ ಗ್ಯಾರಂಟಿ ಯೋಜನೆಗಳನ್ನು ಎಲ್ಲರಿಗೂ ಪರಿಚಯಿಸುವ ಈ ಪ್ರದರ್ಶನ ಚೆನ್ನಾಗಿ ಮೂಡಿ ಬಂದಿದೆ ಎಂದರು.

ರಾಯಚೂರಿನ ವಾರ್ತಾ ಇಲಾಖೆಯು ಪ್ರಕಟಿಸಿದ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಯ ರಾಯಚೂರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಹಿತಿಯ ‘ಎಡೆದೊರೆ ನಾಡಲ್ಲಿ ಪಂಚ ಗ್ಯಾರಂಟಿ ಯಶೋಗಾಥೆ’ ಪುಸ್ತಕವನ್ನು ಸಂಸದರು ಇದೆ ವೇಳೆ ಬಿಡುಗಡೆ ಮಾಡಿದರು.

ADVERTISEMENT

ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಪತಂಗೆ ಜಯವಂತರಾವ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಮಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚಂದ್ರಶೇಖರ, ರಾಯಚೂರ ವಾರ್ತಾ ಇಲಾಖೆಯ ವಾರ್ತಾ ಸಹಾಯಕ ಗವಿಸಿದ್ದಪ್ಪ ಹೊಸಮನಿ, ಪ್ರಕಾಶ, ಲಿಂಗರಾಜ್, ಹೊರಗುತ್ತಿಗೆ ನೌಕರ ರಮೇಶ, ವೆಂಕಟೇಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.