ADVERTISEMENT

ಸುಬುಧೇಂದ್ರ ತೀರ್ಥರ ಚಾತುರ್ಮಾಸ್ಯ ಸಮಾರೋಪ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:02 IST
Last Updated 10 ಸೆಪ್ಟೆಂಬರ್ 2025, 7:02 IST
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಸುಬುಧೇಂದ್ರ ತೀರ್ಥರನ್ನು ಭಕ್ತರು ಬರಮಾಡಿಕೊಂಡರು
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಸುಬುಧೇಂದ್ರ ತೀರ್ಥರನ್ನು ಭಕ್ತರು ಬರಮಾಡಿಕೊಂಡರು   

ರಾಯಚೂರು: ಸುಬುಧೇಂದ್ರ ತೀರ್ಥರ 13ನೇ ಚಾತುರ್ಮಾಸ್ಯ ಸಮಾರೋಪದ ಪ್ರಯುಕ್ತ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶ್ರೀಗಳು ಬೆಳಿಗ್ಗೆ ಬ್ರಹ್ಮ ಕರಾರ್ಚಿತ ಮೂಲ ರಾಮದೇವರ ಪೂಜೆ ನೆರವೇರಿಸಿದರು. ನಂತರ ಚಾತುರ್ಮಾಸ್ಯ ದೀಕ್ಷಾ ಸಮಾರೋಪದ ವಿಧಿ ವಿಧಾನಗಳನ್ನು ನೆರವೇರಿಸಿದರು. ಸೀಮೋಲ್ಲಂಘನ ಸಂಪ್ರದಾಯದ ಭಾಗವಾಗಿ ಪ್ರಾಣ ದೇವರು, ಮಂಚಾಲಮ್ಮ, ರಾಯರು, ವದೀಂದ್ರ ತೀರ್ಥರು ಮತ್ತು ಇತರ ಯತಿಗಳ ಬೃಂದಾವನಗಳಿಗೆ ಮಂಗಳಾರತಿ ಮಾಡಿದರು.

ಕೊಂಡಾಪುರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳುವ ದಾರಿಯಲ್ಲಿ ನೂರಾರು ಭಕ್ತರು, ಮಂತ್ರಾಲಯದ ಸ್ಥಳೀಯರು ಸ್ವಾಮೀಜಿಗೆ ಹೂವಿನ ಮಳೆಗರೆಯುವ ಮೂಲಕ ಗೌರವ ಸಲ್ಲಿಸಿದರು. ನಂತರ ಸ್ವಾಮೀಜಿ ದೇವಾಲಯಕ್ಕೆ ಭೇಟಿ ನೀಡಿ ಮೆರವಣಿಗೆಯಲ್ಲಿ ಮಠಕ್ಕೆ ಮರಳಿದರು.

ADVERTISEMENT

ಮಠದ ಸಿಬ್ಬಂದಿ, ಭಕ್ತರು, ಶಿಷ್ಯರು ಪುಷ್ಪವೃಷ್ಟಿ ಮತ್ತು ಮಾಲಾರ್ಪಣೆಯೊಂದಿಗೆ ಗುರುವಂದನೆ ಸಲ್ಲಿಸಿದರು. ಸ್ವಾಮೀಜಿ ಅನುಗ್ರಹ ಸಂದೇಶ ಮತ್ತು ಫಲಮಂತ್ರಾಕ್ಷತೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.