ADVERTISEMENT

ಜಾಲಹಳ್ಳಿ | ತೂಗು ಸೇತು ನಿರ್ಮಾಣಕ್ಕೆ ಸ್ವಾಮೀಜಿ ಮನವಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:30 IST
Last Updated 8 ಸೆಪ್ಟೆಂಬರ್ 2025, 6:30 IST
ವೀರಗೋಟ ಗ್ರಾಮದ ಆದಿ ಮೌನೇಶ್ವರದ ಅಡವಿಲಿಂಗ ಸ್ವಾಮೀಜಿ
ವೀರಗೋಟ ಗ್ರಾಮದ ಆದಿ ಮೌನೇಶ್ವರದ ಅಡವಿಲಿಂಗ ಸ್ವಾಮೀಜಿ   

ಜಾಲಹಳ್ಳಿ: ಸಮೀಪದ ವೀರಗೋಟ್ ಗ್ರಾಮದ ಪಕ್ಕದಲ್ಲಿ ಹರಿಯುವ ಕೃಷ್ಣಾ ನದಿಗೆ ಅಡ್ಡಲಾಗಿ ತಿಂಥಣಿ
ಗ್ರಾಮದ ಮೌನೇಶ್ವರ ದೇವಸ್ಥಾನಕ್ಕೆ ಹೋಗಲು ಅನುಕೂಲವಾಗುವಂತೆ ತೂಗು ಸೇತುವೆ ನಿರ್ಮಿಸಬೇಕು ಎಂದು ವೀರಗೋಟ ಗ್ರಾಮದ ಆದಿ ಮೌನೇಶ್ವರ ಮಠದ ಅಡವಿಲಿಂಗ ಸ್ವಾಮೀಜಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ದೇವದುರ್ಗ ತಾಲ್ಲೂಕಿನ ವೀರಗೋಟ ಗ್ರಾಮದಲ್ಲಿರುವ ಆದಿ ಮೌನೇಶ್ವರ ಮಠ ಹಾಗೂ ಸುರಪುರ ತಾಲ್ಲೂಕಿನ ತಿಂಥಣಿ ಗ್ರಾಮದ ಮೌನೇಶ್ವರ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ಭೇಟಿ ನೀಡುತ್ದಾರೆ. ಈ ಎರಡು ದೇವಸ್ಥಾನಗಳ ಮಧ್ಯೆ ಕೃಷ್ಣಾ ನದಿಯಿದ್ದು ತೆಪ್ಪಗಳಲ್ಲಿ ಹೋಗಿ ಬರುತ್ತಾರೆ. 200 ಮೀಟರ್ ಉದ್ದದ ತೂಗು ಸೇತುವೆ ನಿರ್ಮಾಣಕ್ಕೆ ಎರಡು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಗಮನ ಹರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT