ADVERTISEMENT

ಲೋಕಕಲ್ಯಾಣಾರ್ಥ ಮೆಟ್ಟಿಲುಗಳ ಮೇಲೆ ಸ್ವಾಮೀಜಿ ಉರುಳುಸೇವೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 12:51 IST
Last Updated 5 ಜನವರಿ 2021, 12:51 IST
ಸಿಂಧನೂರು ತಾಲ್ಲೂಕಿನ ಹುಡಾ ಗ್ರಾಮದ ಭೈರವೇಶ್ವರ ದೇವಸ್ಥಾನದ ಬೆಟ್ಟದಲ್ಲಿ ಮೈಲಾರಲಿಂಗ ಸ್ವಾಮಿ ಅವರು ಭಕ್ತರ ನೆರವಿನೊಂದಿಗೆ ಸೋಮವಾರ ಉರುಳುಸೇವೆ ನಡೆಸಿದರು
ಸಿಂಧನೂರು ತಾಲ್ಲೂಕಿನ ಹುಡಾ ಗ್ರಾಮದ ಭೈರವೇಶ್ವರ ದೇವಸ್ಥಾನದ ಬೆಟ್ಟದಲ್ಲಿ ಮೈಲಾರಲಿಂಗ ಸ್ವಾಮಿ ಅವರು ಭಕ್ತರ ನೆರವಿನೊಂದಿಗೆ ಸೋಮವಾರ ಉರುಳುಸೇವೆ ನಡೆಸಿದರು   

ಸಿಂಧನೂರು: ಧಾರವಾಡದ ರಾಜೀವಗಾಂಧಿನಗರದ ಓಂ ಶ್ರೀ ಭಂಡಾರದ ಒಡೆಯ ಹಾಗೂ ಆದಿಶಕ್ತಿ ಎಣ್ಣೆ ಹೊಳೆಯಮ್ಮ ದೇವಿ ದೇವಸ್ಥಾನದ ಮೈಲಾರಲಿಂಗ ಸ್ವಾಮಿ ಅವರು ಸಿಂಧನೂರು ತಾಲ್ಲೂಕಿನ ಹುಡಾ ಗ್ರಾಮದ ಬೆಟ್ಟದಲ್ಲಿರುವ ಭೈರವೇಶ್ವರ ದೇವಸ್ಥಾನಕ್ಕೆ ಮೆಟ್ಟಿಲುಗಳ ಮೇಲೆಯೇ ಉರುಳುಸೇವೆ ಮಾಡಿದರು.

ಲೋಕ ಕಲ್ಯಾಣಾರ್ಥವಾಗಿ ಮಂಬರುವ ದಿನಗಳಲ್ಲಿ ಪ್ರಕೃತಿ ವಿಕೋಪಗಳು, ರೋಗ-ರುಜಿನುಗಳು ಮನುಕುಲಕ್ಕೆ ಪರಿಣಾಮ ಬೀರಬಾರದೆಂಬ ಪ್ರಾರ್ಥನೆಯೊಂದಿಗೆ ಉರುಳುಸೇವೆ ಮಾಡುತ್ತಿರುವುದಾಗಿ ಸ್ವಾಮೀಜಿ ತಿಳಿಸಿದರು.

ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ 541 ಮೆಟ್ಟಿಲುಗಳಿವೆ. ಮೆಟ್ಟಿಲುಗಳ ಮೇಲೆ ಬಟ್ಟೆ ಹಾಕಲಾಗಿತ್ತು. ವಾಪಸ್‌ ಉರುಳುಸೇವೆ ಮಾಡುತ್ತಾ ಕೆಳಗಿಳಿದರು. ಆನಂತರ ತಾಲ್ಲೂಕಿನ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ಕ್ಷೇತ್ರದಲ್ಲಿ ಉರುಳು ಸೇವೆ ಮಾಡಿ ದರ್ಶನ ಪಡೆದರು.
ಉರುಳು ಸೇವೆಯುದ್ದಕ್ಕೂ ಸಾಧು-ಸಂತರು, ಭಕ್ತರು, ಯುವಕರು, ಮಕ್ಕಳು ಭಜನೆ ಮಾಡುತ್ತಾ ಬೆಟ್ಟವನ್ನೇರಿ ಪ್ರಾರ್ಥನೆ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.